ವಿಟ್ಲ: ಇಬ್ಬರು ಐಟಿಐ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿ ಚೂರಿ ಇರಿತಕ್ಕೊಳಗಾದ ಘಟನೆ ವಿಟ್ಲದ ಐಟಿಐ ತರಗತಿ ಒಳಗಡೆ ನಡೆದಿದೆ.
Sponsoredಚೂರಿ ಇರಿತದಿಂದ ಪುತ್ತೂರು ಬನ್ನೂರು ನಿವಾಸಿ ಮಹಮ್ಮದ್ ರಿಯಾನ್ (18) ಮತ್ತು ಮಂಜೇಶ್ವರ ದೈಗೋಲಿ ನಿವಾಸಿ ಯಜೇಶ್ ಎನ್ನುವವರು ಗಾಯಗೊಂಡಿದ್ದು, ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
Marriage AdSponsoredಪ್ರಥಮ ವರ್ಷದ ಎಲೆಕ್ಟ್ರಿಷಿಯನ್ ಐಟಿಐ ಕಲಿಯುತ್ತಿರುವ ಮಹಮ್ಮದ್ ರಿಯಾನ್ ಮತ್ತು ವಿಟ್ಲ ನಿವಾಸಿ ಹೇಮಂತ್ ನಡುವೆ ಜಗಳ ಉಂಟಾಗಿ, ಅದನ್ನು ತಡೆಯಲು ಬಂದ ಇನ್ನೋರ್ವ ವಿದ್ಯಾರ್ಥಿ ಯಜೇಶ್‌ಗೆ ಗಾಯವಾಗಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.




