ಸೋಮವಾರ, 26 ಅಕ್ಟೋಬರ್ 2026
Trending

Uttar Pradesh: ಕುಡಿದ ಮತ್ತಲ್ಲಿ ಶಾಲೆಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದ ಕುಡುಕ!

Uttar Pradesh: ಕುಡಕನೋರ್ವ ಶಾಲೆಗೆ ನುಗ್ಗಿ ತರಗತಿಯಿಂದ ಮಕ್ಕಳನ್ನು ಓಡಿಸಿರುವ ಘಟನೆ ನಡೆದಿದೆ. ಜೊತೆಗೆ ಶಿಕ್ಷಕರೊಂದಿಗೆ ಅನುಚಿತ ವರ್ತನೆ ಮಾಡಿದ್ದಾನೆ.

Uttar Pradesh: ಕುಡಕನೋರ್ವ ಶಾಲೆಗೆ ನುಗ್ಗಿ ತರಗತಿಯಿಂದ ಮಕ್ಕಳನ್ನು ಓಡಿಸಿರುವ ಘಟನೆ ನಡೆದಿದೆ. ಜೊತೆಗೆ ಶಿಕ್ಷಕರೊಂದಿಗೆ ಅನುಚಿತ ವರ್ತನೆ ಮಾಡಿದ್ದಾನೆ. ಈ ಕುರಿತ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Sponsored

ಉತ್ತರಪ್ರದೇಶದ ಮೀರತ್‌ನಲ್ಲಿ ಈ ಘಟನೆ ನಡೆದಿದೆ. ಮೀರತ್‌ನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಡುಕನೊಬ್ಬ ಈ ಗಲಾಟೆ ಮಾಡಿದ್ದಾನೆ. ಕಂಠಪೂರ್ತಿ ಕುಡಿದು ಮದ್ಯ ಸೇವಿಸಿ ಶಾಲೆಗೆ ನುಗ್ಗಿ ಶರ್ಟ್‌ ಬಿಚ್ಚಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಓಡಿಸಿ ಅನುಚಿತ ವರ್ತನೆ ಮಾಡಿದ್ದಾನೆ.