ಉಪ್ಪಿನಂಗಡಿ: ಪೆರ್ನೆಯ ಮೈರಕಟ್ಟೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆಸೆದು ಒಬ್ಬ ಮಗುವಿನ ಸಾವಿಗೆ ಕಾರಣಳಾದ ಆರೋಪಿತೆ ಮಹಿಳೆ ನೂರುನ್ನಿಸಾಗೆ ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
Sponsoredಮೈರಕಟ್ಟೆ ನಿವಾಸಿಗಳಾದ ಸಿನಾನ್ ಹಾಗೂ ಅವರ ಪತ್ನಿ ನೂರುನ್ನಿಸಾ ನಡುವೆ ಫೋನ್‌ನಲ್ಲಿ ಕಲಹ ನಡೆದಿತ್ತು. ಇದರಿಂದ ಕೋಪಗೊಂಡ ಆರೋಪಿ ನೂರುನ್ನಿಸಾ ಆಕೆಯ ಮೂರುವರೆ ವರ್ಷದ ಹೆಣ್ಣು ಮಗು ಹಾಗೂ ಆಕೆಯ ಗಂಡನ ತಂಗಿಯ ಮೂರು ವರ್ಷದ ಗಂಡು ಮಗುವನ್ನು ಸಮೀಪದ ಬಾವಿಗೆಸೆದಿದ್ದಳು.
Marriage AdSponsoredಸ್ಥಳೀಯರು ಮಕ್ಕಳನ್ನು ಮೇಲಕ್ಕೆತ್ತಿದ್ದು, ಈ ಪೈಕಿ ನೂರುನ್ನಿಸಾಳ ಗಂಡನ ತಂಗಿಯ ಮಗು ರಬೀಜ್ ಮೃತಪಟ್ಟಿದ್ದ. ನೂರುನ್ನಿಸಾಳ ಹೆಣ್ಣು ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಕುರಿತು ಉಪ್ಪಿನಂಗಡಿ ಪೊಲೀಸರು ನೂರುನ್ನಿಸಾಳನ್ನು ಬಂಧನ ಮಾಡಿದ್ದು, ಸೆ.20 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿತೆಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಮಾಡಿದ್ದಾರೆ.




