ಉಡುಪಿ: ಮರವಂತೆ ಗ್ರಾಮದ ರಜಿನಾ ಅವರ ಸ್ಕೂಟರ್‌ನಲ್ಲಿ ನಿಶಾತುಲ್ ಫಾತಿಮಾ (24) ಮತ್ತು ಅವರ ಮಗು ಫಾತಿಮಾ ಹಮ್ದಾ ಸಜ್ರಾ (3) ಅವರು ಜನ್ಸಾಲೆಗೆ ಕಾರ್ಯಕ್ರಮಕ್ಕೆ ಬಂದಿದ್ದರು.
ಆ.28 ರಂದು ಕಾರ್ಯಕ್ರಮ ಮುಗಿಸಿ ಮರವಂತೆಗೆ ತೆರಳುವಾಗ ಮೂಡುಬಗೆ ವಿವೇಕನಗರದ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿದಾಗ, ಮಗುವನ್ನು ಹಿಡಿದುಕೊಂಡು ತಾಯಿ ಸ್ಕೂಟರ್‌ನಿಂದ ಜಿಗಿದಿದ್ದು, ಪರಿಣಾಮ ತಾಯಿ ಮಗು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಂದಾಪುರದ ಖಾಸಗಿ ಆಸ್ಪತ್ರೆಗೆ ಇವರನ್ನು ದಾಖಲು ಮಾಡಲಾಗಿದೆ. ನಂತರ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗೆಂದು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




