ಶನಿವಾರ, 24 ಅಕ್ಟೋಬರ್ 2026

ವಿದ್ಯಾರ್ಥಿನಿಯರೆದುರೇ ಪ್ಯಾಂಟ್‌ ಬಿಚ್ಚಿದ ಶಿಕ್ಷಕ

ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತನೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಲಭ್ಯ ಮಾಹಿತಿಯ ಅನುಸಾರ, ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮಕ್ಕಳ ಎದುರೇ ಪ್ಯಾಂಟ್‌ ಬಿಚ್ಚಲು ಯತ್ನಿಸಿದ್ದು, ವಿದ್ಯಾರ್ಥಿನಿಯರು ಭಯಗೊಂಡು ಜೋರಾಗಿ ಕಿರುಚಿದ್ದಾರೆ. ಮಕ್ಕಳ ಕೂಗು ಕೇಳಿದ ಸ್ಥಳೀಯರು ಹಾಗೂ ಪೋಷಕರು ಕೂಡಲೇ ಶಾಲೆಗೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಆರೋಪಿತ ಶಿಕ್ಷಕನನ್ನು ವಶಕ್ಕೆ ಪಡೆದು ತೀವ್ರ ತರಾಟೆಗೆಗೆ ತೆಗೆದುಕೊಂಡಿದ್ದು, ನಂತರ ಆತನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ. ಈ ಘಟನೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.