ಖಾಸಗಿ ಹೋಟೆಲ್‌ನ ಸಪ್ಲೈಯರ್ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿರುವ ಪ್ರಕರಣ ಕುರಿತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪೊಲೀಸರು ಆರೋಪಿಯನ್ನು ಬಂಧನ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.
Sponsoredರಾಜಸ್ಥಾನ ಮೂಲದ ಹರೀಶ್ ಪಟ್ಟಣದ ಗಂಜಾಂ ರಸ್ತೆಯ ಹೈವೆ ಸೇತುವೆ ಬಳಿ ಇರುವ ಶರವಣ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಪುರುಷರು ಮತ್ತು ಮಹಿಳೆಯರ ಶೌಚಾಲಯದ ನಡುವೆ ಇರುವ ಗೋಡೆ ಮೇಲೆ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎನ್ನುವ ಆರೋಪವಿದೆ.
Marriage AdSponsoredಹೋಟೆಲ್‌ಗೆ ಬಂದ ಮಹಿಳೆಯರು ಶೌಚಾಲಯದ ಒಳಗೆ ಹೋದ ವೇಳೆ ಅವರ ಖಾಸಗಿ ಭಾಗಗಳನ್ನು ಚಿತ್ರೀಕರಣ ಮಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಮಹಿಳೆಯೊಬ್ಬರಿಗೆ ತಿಳಿದು, ಹೋಟೆಲ್ ಮಾಲೀಕರಿಗೆ ದೂರಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಹೋಟೆಲ್‌ಗೆ ಬಂದಿದ್ದು, ಶೌಚಾಲಯದ ಬಳಿ ಮೊಬೈಲ್ ಇಟ್ಟ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ದಿನಾ ಈ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ಪೊಲೀಸರು ಆರೋಪಿ ಸಪ್ಲೈಯರ್ ಹರೀಶ್ ಹಾಗೂ ಆತನ ಮೊಬೈಲ್ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.





