ಭಾನುವಾರ, 8 ನವೆಂಬರ್ 2026

ಸುಬ್ರಹ್ಮಣ್ಯ: ಮನೆಯ ಗಾದ್ರೋಜ್ ಲಾಕ್ ಒಡೆದು ಚಿನ್ನಾಭರಣ ಕದ್ದ ಕಳ್ಳ!

Image Credit Source: David chico
Advertisement
Advertisement

ಸುಬ್ರಹ್ಮಣ್ಯ: ಗಾದ್ರೇಜ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಮಾಯವಾದ ಘಟನೆ ಸುಬ್ರಹ್ಮಣ್ಯದ ಗುತ್ತಿಗಾರಿನಲ್ಲಿ ಬೆಳಕಿಗೆ ಬಂದಿದೆ.

Sponsored

ಗುತ್ತಿಗಾರಿನ ನಿವಾಸಿ ರಂಜಿತ್ ರಾಜ್ ಏಪ್ರಿಲ್‌ನಲ್ಲಿ ಮದುವೆಯಾಗಿ ಮೇ ತಿಂಗಳಲ್ಲಿ ಅಬುಧಾಬಿಗೆ ತೆರಳಿದ್ದರು. ತೆರಳುವ ಮುನ್ನ ಪತ್ನಿಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮನೆಯ ಗಾಡೇಜ್‌ನಲ್ಲಿಟ್ಟು ಲಾಕ್ ಮಾಡಿ, ಕೀಲಿಕೈಯನ್ನು ತಾಯಿಗೆ ನೀಡಿದ್ದರು.

Advertisement
Advertisement

ನವೆಂಬರ್ 1ರಂದು ರಂಜಿತ್ ಅಬುಧಾಬಿಯಿಂದ ವಾಪಸ್ ಬಂದಾಗ ಗಾಡೇಜ್ ಬಾಗಿಲು ತೆರೆದಿತ್ತು. ಮಾರನೇ ದಿನ ಪತ್ನಿ ಲಾಕರ್ ಪರಿಶೀಲಿಸಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಬೆಳ್ಳಿ ಒಡವೆ ಹಾಗೂ ನಗದು ಹಣ ಹಾಗೆಯೇ ಇತ್ತು, ಆದರೆ 69 ಗ್ರಾಂ ತೂಕದ ಚಿನ್ನಾಭರಣಗಳು ಮಾತ್ರ ಕಾಣೆಯಾಗಿದ್ದವು.

Advertisement

ಸುಮಾರು 7.61 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆಗಳು, ಲಕ್ಷ್ಮಿ ಪೆಂಡೆಂಟ್ ನೆಕ್ಸಸ್, ಜುಮುಕಿ ಹಾಗೂ ಚಿನ್ನದ ಚೈನ್ ಕಳವಾಗಿದ್ದು, ಕುಟುಂಬಸ್ಥರನ್ನು ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.

Advertisement
Advertisement