ಪುತ್ತೂರು : ಮಹಿಳೆಯನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿ ಕಿರುಕುಳ:ಯುವಕನ ವಿರುದ್ಧ ದೂರು
ಪುತ್ತೂರು: ಅಂಗನವಾಡಿಯಿಂದ ಮಗಳನ್ನು ಕರೆದುಕೊಂಡು ಬರಲು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿ, ಅಪ್ಪಿಕೊಳ್ಳುವಂತೆ ಒತ್ತಾಯಿಸಿದ ಘಟನೆ ಕುರಿಯ ಪ್ರಾಥಮಿಕ ಶಾಲೆಯ ಬಳಿ ನ.6ರಂದು ನಡೆದಿದೆ.
Sponsoredಕುರಿಯ ಪಡ್ಡು ನಿವಾಸಿ ಮಹಿಳೆಯೋರ್ವರು ಮಧ್ಯಾಹ್ನ ಮಾವಿನಕಟ್ಟೆ ಅಂಗನವಾಡಿಯಿಂದ ಮಗಳನ್ನು ಕರೆದುಕೊಂಡು ಬರಲು ಮನೆಯಿಂದ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುರಿಯ ಪ್ರಾಥಮಿಕ ಶಾಲೆಯ ಬಳಿ ತಲುಪಿದಾಗ, ಪಂಜಳ ಕಡೆಯಿಂದ ಸ್ಕೂಟರ್‌ನಲ್ಲಿ ಬಂದ ಯುವಕನೊಬ್ಬ ಅವರನ್ನು ಹಿಂಬಾಲಿಸಿಕೊಂಡು ಬಂದು ಪಕ್ಕದಲ್ಲಿ ಸ್ಕೂಟರ್ ನಿಲ್ಲಿಸಿದ್ದಾನೆ.
ಬಳಿಕ ತನ್ನೊಂದಿಗೆ ಸ್ಕೂಟರ್‌ನಲ್ಲಿ ಬರುವಂತೆ ಕೇಳಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿ ಮುಂದೆ ಸಾಗಿದಾಗ ಮತ್ತೆ ಹತ್ತಿರ ಬಂದು ತನ್ನನ್ನು ಅಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ.ಯುವಕನ ವರ್ತನೆಯಿಂದ ಭಯಗೊಂಡ ಮಹಿಳೆ ಬೊಬ್ಬೆ ಹೊಡೆದ ಪರಿಣಾಮ ಆಸುಪಾಸಿನಲ್ಲಿದ್ದವರು ಓಡಿ ಬಂದು ಯುವಕನನ್ನು ಹಿಡಿದು ವಿಚಾರಿಸಿದ್ದಾರೆ.
ಇಯಾಸ್ ಪುರುಷರಕಟ್ಟೆ ಎಂದು ಈ ವೇಳೆ ಆತ ತಿಳಿಸಿದ್ದು, ಆತ ಬಂದಿದ್ದ ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ದೂರಿನಲ್ಲಿ ತಿಳಿಸಲಾಗಿದೆ. ಇದೇ ಯುವಕ ಅ.30ರಂದು ಮಧ್ಯಾಹ್ನ 1 ಗಂಟೆಯ ವೇಳೆಯೂ ಅಂಗನವಾಡಿಯಿಂದ ಮಗುವನ್ನು ಕರೆತರಲು ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ. ಆದರೆ ಆ ಸಂದರ್ಭದಲ್ಲಿ ಭಯದಿಂದಾಗಿ ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ಗಮನಿಸಲು ಸಾಧ್ಯವಾಗಿರಲಿಲ್ಲ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ತನ್ನನ್ನು ಪದೇಪದೇ ಸ್ಕೂಟರ್ನಲ್ಲಿ ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿ, ಅಪ್ಪಿಕೊಳ್ಳುವಂತೆ ಒತ್ತಾಯಿಸಿದ ಇಯಾಸ್ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.




