ಶನಿವಾರ, 24 ಅಕ್ಟೋಬರ್ 2026

ಕಮಲಾಕರ ಭಟ್‌ ಮೇಲೆ ಪೋಕ್ಸೋ ಕೇಸು ದಾಖಲು

ಕಾರವಾರ: ಕಮಲಾಕರ ಭಟ್‌ ಸುಚಿತ್ರಾಳ ಸಹವಾಸ ಮಾಡಿ ಕೊಲೆ ಪ್ರಕರಣದಲ್ಲಿ ಜೈಲು ಕಂಬಿ ಎಣಿಸುತ್ತಿದ್ದು, ಹೀಗಿರುವಾಗಲೇ ಇದೀಗ ಕಮಲಾಕರ ಭಟ್‌ಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕೇಸ್‌ ದಾಖಲಾಗಿದೆ.

ಈಗಾಗಲೇ ವಸಂತ್‌ ನಾಯ್ಕ್‌ ಕೊಲೆ ಪ್ರಕರಣದಲ್ಲಿ ಕಮಲಾಕರ್‌ ಜೈಲು ಸೇರಿದ್ದು, ಇದೀಗ ಇನ್ನೊಂದು ಕೇಸು ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ತುಂಗಾನಗರ ವ್ಯಾಪ್ತಿಯಲ್ಲಿ ಆದ ಘಟನೆ ಇದಾಗಿದ್ದು, ಪೋಕ್ಸೋ ಕೇಸು ದಾಖಲಾಗಿದೆ.