ಮುಲ್ಕಿ: ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮುಲ್ಕಿ ಪೊಲೀಸರು ಬಂಧನ ಮಾಡಿದ ಘಟನೆ ಬುಧವಾರ ಬಪ್ಪನಾಡು ಜಂಕ್ಷನ್ ಬಳಿ ನಡೆದಿದೆ.
Sponsoredಮೂಲ್ಕಿ ಠಾಣೆಯ ಎಎಸ್‌ಐ ರೇವಣ್ಣ ಹಾಗೂ ಪಿಸಿ ಸುನಿಲ್ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಲಾರಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂತು. 13 ಕೋಣಗಳು, 1 ಎತ್ತು, 1 ಎಮ್ಮೆ, ಹಾಗೂ 1 ಜೆರ್ಸಿ ಕರು ಸೇರಿ ಒಟ್ಟು 16 ಜಾನುವಾರುಗಳನ್ನು ನೈಲಾನ್ ಹಗ್ಗಗಳಿಂದ ಲಾರಿಯ ಎರಡೂ ಬದಿಯ ಬಾಡಿ ಹಾಗೂ ಕಬ್ಬಿಣದ ಕ್ಯಾರೇಜ್‌ಗೆ ಬಿಗಿಯಾಗಿ ಕಟ್ಟಿ ಸಾಗಿಸಲಾಗುತ್ತಿತ್ತು.
Marriage AdSponsoredಕೆಲವು ಕೋಣಗಳು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಚಾಲಕ ಮಾಲತೇಶ್ ಡಿ.ಎಂ.(26) ರಾಜು (22) ಅವರನ್ನು ಬಂಧನ ಮಾಡಲಾಯಿತು. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




