ಶನಿವಾರ, 24 ಅಕ್ಟೋಬರ್ 2026

ಕೆಪಿಎಸ್‌ಸಿ ಹಗರಣ-ಕನ್ನಾಳೆ, ಗ್ಯಾನೇಂದ್ರ ಜೈಲಲ್ಲೇ ಅರೆಸ್ಟ್‌

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ ಕುರಿತಂತೆ ಜಾರಿ ನಿರ್ದೇಶನಾಲಯವು ಗ್ಯಾನೇಂದ್ರ ಹಾಗೂ ಬಸವರಾಜ್‌ ಕನ್ನಾಳೆ ಅವರನ್ನು ಜೈಲಿನಲ್ಲಿಯೇ ಬಂಧನ ಮಾಡಿದ್ದಾರೆ. ವಿಚಾರಣೆಗೆ ಅಸಹಾಕಾರ ನೀಡಿದ ಕಾರಣ ಇಡಿ ತನ್ನ ಕಸ್ಟಡಿಗೆ ಪಡೆದುಕೊಂಡಿದೆ.

ಬಂಧನದಲ್ಲಿದ್ದ ಇಬ್ಬರನ್ನು ಇಡಿ ಅಧಿಕಾರಿಗಳು ಮೂರು ದಿನ ಜೈಲಿನಲ್ಲಿಯೇ ವಿಚಾರಣೆ ನಡೆಸಿದ್ದರು. ಆದರೆ ಅಸಹಾಕಾರ ನೀಡಿದ ಕಾರಣ ನಿನ್ನೆ ರಾತ್ರಿ ಜೈಲಿನಲ್ಲಿಯೇ ಗ್ಯಾನೇಂದ್ರ ಮತ್ತು ಬಸವರಾಜ್‌ ಕನ್ನಾಳೆ ಇಬ್ಬರನ್ನು ಬಂಧನ ಮಾಡಲಾಗಿದೆ.

ಬಂಧನದ ನಂತರ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಇಡಿ, ಹೆಚ್ಚಿನ ವಿಚಾರಣೆಗೆಂದು ಕಸ್ಟಡಿಗೆ ಪಡೆದುಕೊಂಡಿದೆ.