ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಕೂಡಿ ಹಾಕಿ ಬಾಲಕಿ ಜೊತೆ ನಗ್ನವಾಗಿ ನಿಲ್ಲಿಸಿ ವಿಡಿಯೋ ಚಿತ್ರೀಕರಣ ಮಾಡಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆಯೊಡ್ಡಿ 1,02,000 ರೂ. ಸುಲಿಗೆ ಮಾಡಿದ ಘಟನೆಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
Sponsoredಸೇರಾಜೆಯ ವ್ಯಕ್ತಿ ಸುಜಿತ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆ.29 ರಂದು ಸಂಜೆ ಈ ಘಟನೆ ನಡೆದಿದೆ.
Marriage AdSponsoredಉಕ್ಕಿನಡ್ಕದಲ್ಲಿ ಸುಜಿತ್ ಎಂಬುವವರನ್ನು ಐವರ ತಂಡ ಕತ್ತಿ ತೋರಿಸಿ ಬೆದರಿಕೆಯೊಡ್ಡಿ ಕಾರಿನಲ್ಲಿ ಅಪಹರಿಸಿ ಚೆರ್ಕಳಕ್ಕೆ ಸಮೀಪದ ಕ್ವಾರ್ಟರ್ಸ್‌ಗೆ ತಲುಪಿಸಿ ಕೊಠಡಿಯಲ್ಲಿ ಕೂಡಿ ಹಾಕಿ, ನಂತರ ಬೆದರಿಕೆಯೊಡ್ಡಿ ಸುಜಿತ್ ಅವರನ್ನು ನಗ್ನ ಮಾಡಲಾಯಿತು. ಈ ಹೊತ್ತಿನಲ್ಲಿ ಕೊಠಡಿಯಲ್ಲಿದ್ದ ಬಾಲಕಿ ಜೊತೆ ನಿಲ್ಲಿಸಿ ವಿಡಿಯೋ ಮಾಡಿ, ನಾವು ಕೇಳಿದಷ್ಟು ಹಣ ನೀಡದೇ ಹೋದಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ತಂಡ ಬೆದರಿಸಿದೆ. ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ ನಂತರ 1,02,000 ರೂ. ಸುಲಿಗೆ ಮಾಡಿ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಬದಿಯಡ್ಕ ಪೊಲೀಸರು ಐವರ ವಿರುದ್ಧ ಕೇಸು ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.




