Advertisement
Advertisement
ಕಡಬ: ಆಟೋ ಬಾಡಿಗೆ ಮಾಡಿಕೊಂಡು ಹೋಗಿದ್ದ ಹೊರರಾಜ್ಯದ ಕಾರ್ಮಿಕರು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ನ.4ರ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ಆಟೋ ಚಾಲಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Sponsoredಆಟೋ ಚಾಲಕ ಕೃಷ್ಣ ಹಲ್ಲೆಗೊಳಗಾದ ವ್ಯಕ್ತಿ.
ನೂಜಿಬಾಳ್ತಿಲ ಮರಳು ರಾಂಪ್ ಇರುವ ಕುರಿಯಾಳಕೊಪ್ಪಕ್ಕೆ ಕೃಷ್ಣ ಅವರ ಆಟೋ ಬಾಡಿಗೆ ಮಾಡಿ ಹೊರರಾಜ್ಯದ ಕಾರ್ಮಿಕರು ತೆರಳಿದ್ದರು. ಪ್ರಯಾಣದ ಮುಗಿದ ನಂತರ ನನಗೆ ಬಾಡಿಗೆ ಹಣ ನೀಡದೆ, ತನ್ನ ಮೊಬೈಲ್ ಫೋನ್, ಹಣ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಚಾಲಕ ಕೃಷ್ಣ ಆರೋಪ ಮಾಡಿದ್ದಾರೆ.
ನದಿಯಿಂದ ಮರಳು ಸಂಗ್ರಹ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹೊರರಾಜ್ಯದ ಕಾರ್ಮಿಕರು ಈ ಕೃತ್ಯ ಮಾಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿರುವ ಕುರಿತು ವರದಿಯಾಗಿದೆ. ಹೆಚ್ಚಿನ ವರದಿ ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸುತ್ತಿದ್ದಾರೆ.