ಸೋಮವಾರ, 26 ಅಕ್ಟೋಬರ್ 2026
Trending

ನಾಲ್ಕು ಗಂಟೆಗಳ ಕಾಲ ಪತ್ನಿಯನ್ನು ಕಿವಿ ಹಿಡಿದು ಬಗ್ಗಿಸಿ ನಿಲ್ಲಿಸಿ ಚಿತ್ರಹಿಂಸೆ ನೀಡಿದ ಪತಿ, ಪಾರಾಗಲು ಯತ್ನಿಸಿದ್ದಕ್ಕೆ ಚೂರಿ ಇರಿತ

Image Credit: Public Tv

ಪತಿಯೋರ್ವ ತನ್ನ ಪತ್ನಿಯನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಅಮಾನವೀಯ ಭಂಗಿಯಲ್ಲಿ ನಿಲ್ಲಿಸಿ ಚಿತ್ರಹಿಂಸೆ ನೀಡಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಹಲ್ಲೆ ನಡೆದ ಬಳಿಕ ಮಹಿಳೆಯನ್ನು ಮನೆಯಲ್ಲಿ ಕೂಡಿಹಾಕಿದ್ದಾನೆ. ಪತಿಯ ಈ ಚಿತ್ರಹಿಂಸೆಯನ್ನು ತಾಳಲಾರದೆ ಮಹಿಳೆ ತವರು ಮನೆಗೆ ತೆರಳಿದ್ದು, ಅಲ್ಲಿ ಕೂಡಾ ಆಕೆಗೆ ಪತಿ ಚಾಕು ಹಾಕಿದ್ದಾನೆ.

Sponsored

ಅರ್ಬಾಜ್‌ ಸೈಯದ್‌ (ಪತಿ)ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈತ ತನ್ನ ಪತ್ನಿಯನ್ನು ನಾಲ್ಕು ಗಂಟೆಗಳ ಕಾಲ ಕಿವಿ ಹಿಡಿಸಿ ಬಗ್ಗಿಸಿ ನಿಲ್ಲಿಸಿದ್ದ. ಈ ವೇಳೆ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದ. ಮುಖದ ಮೇಲೆ ಆಸಿಡ್‌ ಎರಚುವುದಾಗಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ತನಿಖೆಯ ಸಮಯದಲ್ಲಿ ಅರ್ಬಾಜ್‌ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ 19 ಗಂಭೀರ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.

ಪತ್ನಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.