ಭಾನುವಾರ, 25 ಅಕ್ಟೋಬರ್ 2026
Trending

Maharastra : ಜ್ಯೋತಿಷ್ಯ ಹೇಳುತ್ತಾ ಕಾಮದಾಟ, 58 ಮಹಿಳೆಯರ ಮೇಲೆ ಅತ್ಯಾಚಾರ, ವಿಡಿಯೋ ರೆಕಾರ್ಡ್ – ನಾಸಿಕ್ ಖ್ಯಾತ ಜ್ಯೋತಿಷಿ ಬಂಧನ !!

Maharastra : ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಧ್ಯಾತ್ಮದ ಸೋಗಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಹಾಗೂ 58 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜ್ಯೋತಿಷಿ ಅಶೋಕ್ ಖಾರಟ್‌ (Ashok Kharat) ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Sponsored

ಯಸ್, ಪ್ರಮುಖ ರಾಜಕೀಯ ನಾಯಕರ ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗಿದ್ದ ಸ್ವಯಂ ಘೋಷಿತ ಜ್ಯೋತಿಷಿ ‘ಕ್ಯಾಪ್ಟನ್’ ಅಶೋಕ್ ಖರತ್‌ನನ್ನು 35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ನಾಸಿಕ್ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಖರತ್‌ನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯು ಸಮಾಜದ ಪ್ರಭಾವಿ ಮಹಿಳೆಯರೂ ಸೇರಿದಂತೆ ಒಟ್ಟು 58 ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿರುವುದು ಪತ್ತೆಯಾಗಿದೆ. ಸರ್ಕಾರವಾಡಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಂಧಾ ಶ್ರದ್ಧಾ ನಿರ್ಮೋಲನ್ ಸಮಿತಿ (ANISA) ಈ ಜ್ಯೋತಿಷಿ ವಿರುದ್ಧ ಮೊದಲೇ ಎಚ್ಚರಿಕೆ ನೀಡಿತ್ತು. ಮರ್ಚೆಂಟ್ ನೇವಿಯಲ್ಲಿ ಅಧಿಕಾರಿಯಾಗಿದ್ದ ಖರತ್, ನಿವೃತ್ತಿಯ ನಂತರ ‘ಶಿವನಿಕಾ ಟ್ರಸ್ಟ್’ ಆರಂಭಿಸಿ ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.

ಪೊಲೀಸ್ ಎಫ್‌ಐಆರ್ ಪ್ರಕಾರ, ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿರುವ ಕಾರಣ ತನ್ನನ್ನು ‘ಕ್ಯಾಪ್ಟನ್’ ಎಂದು ಕರೆದುಕೊಳ್ಳುವ ಖಾರಟ್, ಮಹಿಳೆಯರನ್ನು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿ ತನ್ನ ಕಚೇರಿಗೆ ಕರೆಸಿಕೊಳ್ಳುತ್ತಿದ್ದರು.‌ ಅಲ್ಲಿಗೆ ಬಂದ ನಂತರ ಅವರಿಗೆ ಮಾದಕ ವಸ್ತುವನ್ನು ನೀಡುವ ಮೂಲಕ ಸಂಮೋಹನಗೊಳಿಸುತ್ತಿದ್ದನು. ತರುವಾಯ, ಅವನು ಮಹಿಳೆಯರಲ್ಲಿ ಭಯ ಹುಟ್ಟಿಸುವ ಮೂಲಕ ಅತ್ಯಾಚಾರ ಮಾಡುತ್ತಿದ್ದನು. ಅವರ ಗಂಡಂದಿರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಮೂಲಕ ಅಥವಾ ಮಾಟಮಂತ್ರಗಳಿಗೆ ಸಂಬಂಧಿಸಿದ ಭಯವನ್ನು ಉಂಟುಮಾಡುವ ಮೂಲಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಫಿಲ್ಮಿ ಸ್ಟೈಲ್ ಕಾರ್ಯಾಚರಣೆ

ಖರಾತ್ ಅತೀವ ರಾಜಕೀಯ ಪ್ರಭಾವ ಹೊಂದಿದ್ದರಿಂದ, ಆತನ ಬಂಧನದ ಮಾಹಿತಿ ಸೋರಿಕೆಯಾಗದಂತೆ ಪೊಲೀಸರು ಅತೀ ಗೋಪ್ಯ ಕಾರ್ಯಾಚರಣೆ ನಡೆಸಿದರು. ಮಧ್ಯರಾತ್ರಿ ಈತನ ಫಾರ್ಮ್‌ಹೌಸ್ ಮುಂದೆ ಪೊಲೀಸರು “ಕಳ್ಳ ಬಂದಿದ್ದಾನೆ, ಕಳ್ಳ..” ಎಂದು ಜೋರಾಗಿ ಕೂಗುತ್ತಾ ಗದ್ದಲ ಸೃಷ್ಟಿಸಿದರು. ಈ ಗದ್ದಲ ಏನೆಂದು ನೋಡಲು ಖರಾತ್ ಮನೆಯ ಬಾಗಿಲು ತೆರೆದಾಗ, ಪೊಲೀಸರು ಒಳನುಗ್ಗಿ ಆತನ ಬೆಡ್‌ರೂಮ್‌ನಲ್ಲೇ ಬಂಧಿಸಿದ್ದಾರೆ.ದಾಳಿಯ ವೇಳೆ ಫಾರ್ಮ್‌ಹೌಸ್‌ನಲ್ಲಿ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಶಂಕಾಸ್ಪದ ದಾಖಲೆಗಳು ಪತ್ತೆಯಾಗಿವೆ.

SIT ರಚನೆ ಮತ್ತು ರಾಜಕೀಯ ಬಿರುಗಾಳಿ

ಈ ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರವು ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುತೆ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.