Advertisement
Advertisement
ಮಂಗಳೂರು: ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ಬೈದು, ಹಣ ಸುಲಿಗೆ ಮಾಡಿದ್ದಾರೆ ಎಂದು ವಿಟ್ಲ ಮುಡ್ನೂರು ಮೂಲದ, ಪ್ರಸ್ತುತ ಮಂಗಳೂರು ಪಾಂಡೇಶ್ವರದ ಶಿವನಗರದಲ್ಲಿ ವಾಸವಾಗಿರುವ ರವಿರಾಜ್ (39) ಎಂಬುವವರು ನೀಡಿದ ದೂರಿನಂತೆ ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Sponsoredಆ.25,27 ಮತ್ತು ನವೆಂಬರ್ 4 ರಾತ್ರಿ ವೇಳೆ ಕಿರುಕುಳ ನೀಡಿ ಹಣ ಸುಲಿಗೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಾಂಡೇಶ್ವರ ಠಾಣೆಯ ಶಿವರಾಜ್, ಹೊಯ್ಸಳ ಚಾಲಕ ಈರಣ್ಣ ಬೆನ್ನಿ ಮತ್ತು ಇನ್ನೋರ್ವ ಸಿಬ್ಬಂದಿ ಉಮಾನಾಥ ಆರೋಪಿತ ಪೊಲೀಸರು.