ಶನಿವಾರ, 7 ನವೆಂಬರ್ 2026

ಅಣ್ಣನ ಮಗನ ಮದುವೆಗೆ ಸಿಂಗಾಪುರದಿಂದ ಬಂದು, ಗುಂಡಿನ ದಾಳಿಗೆ ಸಾವಿಗೀಡಾದ

Advertisement
Advertisement

ಸಹೋದರನ ಮಗನ ಮದುವೆಗಾಗಿ ಸಿಂಗಾಪುರದಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಫರೀದಾಬಾದ್‌ನ ಸೆಕ್ಟರ್‌ 21C ಯಲ್ಲಿ ನಡೆದಿದೆ.

Sponsored

ಹರಿಯಾಣದ ಹಿಸಾರ್‌ ಪರಮ್‌ಜೀತ್‌ ಧನ್ಕರ್‌ ಗುಂಡಿನ ದಾಳಿಗೆ ಬಲಿಯಾದ ವ್ಯಕ್ತಿ. ಮೋಹನ್‌ ಶರ್ಮಾ ಹತ್ಯೆಗೈದ ಆರೋಪಿ.

Advertisement
Advertisement

ನ.24 ರಂದು ನಡೆಯಲಿದ್ದ ಅಣ್ಣನ ಮಗನ ಮದುವೆ ಸಮಾರಂಭಕ್ಕಾಗಿ ಪರಂಜಿತ್‌ 2 ದಿನಗಳ ಹಿಂದೆ ಬಂದಿದ್ದು. ಶುಕ್ರವಾರ ರಾತ್ರಿ ಜಿಮ್‌ನಿಂದ ಹಿಂತಿರುಗಿದಾಗ, ಕಟ್ಟಡದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮೋಹನ್‌ ಶರ್ಮಾ ಜೊತೆ ಕಾರು ಪಾರ್ಕಿಂಗ್‌ ವಿಚಾರವಾಗಿ ತೀವ್ರ ಜಗಳ ಉಂಟಾಗಿದೆ. ಈ ವೇಳೆ ಜಗಳ ತಾರಕಕ್ಕೇರಿ ಆರೋಪಿ ಮೋಹನ್‌, ತನ್ನ ಬಳಿಯಿದ್ದ ಪರವಾನಗಿ ಹೊಂದಿದ ಪಿಸ್ತೂಲ್‌ನಿಂದ ಸುಮಾರು 15 ರಿಂದ 16 ಸುತ್ತು ಗುಂಡು ಹಾರಿಸಿದ್ದಾನೆ. ಪರಮ್‌ಜಿತ್‌ ದೇಹಕ್ಕೆ 8 ರಿಂದ 9 ಗುಂಡುಗಳು ತಾಗಿದ್ದು, ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Advertisement

ಆರೋಪಿ ಮೋಹನ್‌ ಘಟನೆ ನಡೆದ ಬೆನ್ನಲ್ಲೇ ತನ್ನ ಕುಟುಂಬದ ಜೊತೆ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಇಎಸ್‌ಐಸಿ ವೈದ್ಯಕೀಯ ಕಾಲೇಜಿಗೆ ರವಾನೆ ಮಾಡಿದ್ದು, ಆರೋಪಿ ಪತ್ತೆಗೆ ತನಿಖೆ ಮುಂದುವರಿದಿದೆ.

ವರದಿಯ ಅನುಸಾರ, ಈ ಎರಡೂ ಕುಟುಂಬಗಳ ನಡುವೆ ಈ ಹಿಂದೆಯೂ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಆಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement