ಶನಿವಾರ, 24 ಅಕ್ಟೋಬರ್ 2026

ಲಿವ್‌-ಇನ್‌ ಗೆಳತಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಸುರಿದ ಗೆಳೆಯ, 3 ದಿನಗಳ ಕಾಲ ಸತತ ಹಿಂಸೆ

Live In Relation
Source :10tv telugu

ಯುವಕನೋರ್ವ ತನ್ನ ಲಿವ್‌ ಇನ್‌ ಸಂಗಾತಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಹಾಕಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಲೋಹದ ಬಾಟಲಿಯಿಂದ ಆಕೆಯ ತಲೆಗೆ ಹೊಡೆದು ಸತತ ಮೂರು ದಿನಗಳ ಕಾಲ ಚಿತ್ರಹಿಂಸೆ ನೀಡಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಯುವತಿ ಜೀವನ್ಮರಣ ಹೋರಾಟವನ್ನು ನಡೆಸುತ್ತಿದ್ದಾರೆ.

ತ್ರಿಪುರಾ ಮೂಲದ ಯುವತಿ ಮತ್ತು ಆರೋಪಿ ಶಿವಂ (19) ಸೆಪ್ಟೆಂಬರ್‌ನಲ್ಲಿ ಡೇಟಿಂಗ್‌ ಆಪ್‌ ಮೂಲಕ ಪರಿಚಯಗೊಂಡು, ನಂತರ ಕೆಲವೇ ದಿನಳಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭ ಮಾಡಿದ್ದರು. ಇವರಿಬ್ಬರ ವಿವಾಹದ ಕುರಿತು ಕುಟುಂಬಗಳು ಮಾತುಕತೆ ಶುರು ಮಾಡಿದ್ದವು. ಫೆ.19 ರಂದು ಮದುವೆಯ ವಿಚಾರಕ್ಕೆ ಇಬ್ಬರ ನಡುವೆ ತಡರಾತ್ರಿವರೆಗೆ ಚರ್ಚೆ ನಡೆದಿದೆ. ಚರ್ಚೆ ಜಗಳಕ್ಕೆ ತಿರುಗಿ ಸಿಟ್ಟಿಗೆದ್ದ ಯುವಕ ಆಕೆಯ ಗುಪ್ತಾಂಗಕ್ಕೆ ಸ್ಯಾನಿಟೈಸರ್‌ ಸುರಿದು ಬೆಂಕಿ ಹಚ್ಚಿದ್ದಾನೆ.

ಸತತ 3 ದಿನಗಳ ಕಾಲ ಲೋಹದ ಬಾಟಲಿಯಿಂದ ತಲೆಗೆ ಹೊಡೆದು, ಪೀಠೋಪಕರಣದಿಂದ ಹಲ್ಲೆ ಮಾಡಿ, ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ. ನಂತರ ಯುವತಿ ತನ್ನನ್ನು ರಕ್ಷಣೆ ಮಾಡುವಂತೆ ತಾಯಿಗೆ ಮಾಹಿತಿ ನೀಡಿದ್ದು, ತಾಯಿ ಪೊಲೀಸರಿಗೆ ದೂರು ನೀಡಿದ್ದು, ಬಳಿಕ ಯುವತಿಯ ರಕ್ಷಣೆ ಮಾಡಲಾಗಿದ್ದು, ದೆಹಲಿಯ ಆಸ್ಪತ್ರೆಗೆ ಸೇರಿಸಲಾಗಿದೆ.

ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಲಾಗಿದೆ.