ಬಂಟ್ವಾಳ: ಇಲ್ಲಿನ ಅರಳ ಗ್ರಾಮದ ಮುಲಾರಪಟ್ಟ ನಿವಾಸಿ ಯುವತಿಯೊಬ್ಬಳು ಕೆಲಸಕ್ಕೆಂದು ಹೋಗಿದ್ದು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಮುಲಾರಪಟ್ಟ ಆಝಾದ್ ನಗರದ ನಿವಾಸಿ ಅಬ್ದುಲ್ ರಶೀದ್ ಅವರ ಪುತ್ರಿ ಫಾತಿಮತ್ ಇಪ್ರಾ (18) ನಾಪತ್ತೆಯಾದ ಯುವತಿ.
Sponsoredಪಿಯುಸಿ ವಿದ್ಯಾಭ್ಯಾಸ ಮುಗಿಸಿ ಕಂಪ್ಯೂಟರ್ ತರಬೇತಿ ಪಡೆದಿದ್ದ ಯುವತಿ ಬಿ.ಸಿ.ರೋಡ್ನ ಸೈಬರ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಮಾ.24 ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆಂದು ಹೋಗಿದ್ದು, ಸಂಜೆಯವರೆಗೂ ಮನೆಗೆ ಮರಳಲಿಲ್ಲ. ಆತಂಕಗೊಂಡ ಪೋಷಕರು ಆಕೆ ಕೆಲಸ ಮಾಡುವ ಸೈಬರ್ ಸೆಂಟರ್ನ ಮಾಲೀಕ ಮನ್ನೂರ್ ಅವರ ಬಳಿ ವಿಚಾರಿಸಿದಾಗ ಆಕೆ ಕೆಲಸಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.
Marriage AdSponsoredನಂತರ ಬಂಧು ಮಿತ್ರರ ಮನೆ ಹಾಗೂ ಇತರ ಕಡೆ ಹುಡುಕಾಟ ನಡೆಸಿದರೂ ಯುವತಿಯ ಸುಳಿವು ದೊರಕಿಲ್ಲ. ನಂತರ ಯುವತಿಯ ತಾಯಿ ರಝೀಯಾ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




