ಸೋಮವಾರ, 26 ಅಕ್ಟೋಬರ್ 2026
Trending

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ ಪ್ರಕರಣ, ಯುವತಿಗೆ ಜಾಮೀನು ಮಂಜೂರು

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್‌ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ತಂಗಡಿ ಕರಂಬಾರು ಗ್ರಾಮದ ಯುವತಿಗೆ ಮಧ್ಯಂತರ ಜಾಮೀನು ಲಭಿಸಿರುವ ಕುರಿತು ವರದಿಯಾಗಿದೆ.

Sponsored

ಮಾ.19 ರಂದು ಯುವತಿಯನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಯುವತಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ ಎಂದು ವರದಿಯಾಗಿದೆ. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಸೂಚನೆಯಂತೆ ಜಾಮೀನು ಪಡೆಯುವಲ್ಲಿ ವಕೀಲರಾದ ಅಜಯ್‌ ಸುವರ್ಣ, ಸಂತೋಷ್‌ ಶೆಟ್ಟಿ ಸಹಕರಿಸಿದ್ದಾರೆ.