ಶನಿವಾರ, 24 ಅಕ್ಟೋಬರ್ 2026

ಬಿ.ಸಿ.ರೋಡ್‌ ಯುವತಿಯ ಹತ್ಯೆ ಪ್ರಕರಣ: ಆರೋಪಿಯ ಫೋಟೋ ತಿರುಚಿ ಅಪಪ್ರಚಾರ, ಪ್ರಕರಣ ದಾಖಲು

ಬಿ ಸಿ ರೋಡ್‌ನಲ್ಲಿ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ, ಅದಕ್ಕೆ ಕೇಸರಿ ಶಾಲು ಹಾಗೂ ಕುಂಕಮವನ್ನು ಸೇರಿಸಿ, ಬಜರಂಗ ದಳದ ಮುಖಂಡ ಚೇತನ ಹಾಗೂ ಬಜರಂಗ ದಳದ ಶಾಖೆಯಿಂದ ತರಬೇತಿ ಪಡೆದಿದ್ದ ಎಂಬ ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ಸೌಹಾರ್ದತೆ ಕದಡುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಬಂಟ್ವಾಳ ಪೊಲೀಸ್‌ ಠಾಣೆಗೆ ವಿಹಿಂಪ ನ ಉಪಾಧ್ಯಕ್ಷ ಕೇಶವರವರು ದೂರು ನೀಡಿದ್ದಾರೆ.