ಸೋಮವಾರ, 26 ಅಕ್ಟೋಬರ್ 2026
Trending

ಪೋಸ್ಟ್‌ಮಾರ್ಟಂ ವೇಳೆ ಹೆಣ್ಣು ಶವಗಳ ಬೆತ್ತಲೆ ಚಿತ್ರ ಸೆರೆಹಿಡಿಯುತ್ತಿದ್ದ ಅಟೆಂಡರ್‌ ಬಂಧನ

Triangle love story

ಬೀದರ್‌ನ ಬ್ರಿಮ್ಸ್‌ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್‌ನೋರ್ವ ಪೋಸ್ಟ್‌ ಮಾರ್ಟಂ ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಆರೋಪದಲ್ಲಿ ಬಂಧನ ಮಾಡಲಾಗಿದೆ.

Sponsored

ಆರೋಪಿ ಮುನೀರ್‌ ಅಹ್ಮದ್‌ ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಪೋಸ್ಟ್‌ಮಾರ್ಟಂ ಸಂದರ್ಭ ಮಹಿಳಾ ಶವಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಸಂಗ್ರಹ ಮಾಡುತ್ತಿದ್ದನೆಂದು ವಿಚಾರ ತಿಳಿದು ಆಸ್ಪತ್ರೆ ಸಿಬ್ಬಂದಿ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿಯ ಮೊಬೈಲನ್ನು ಪರಿಶೀಲನೆ ಮಾಡಿದಾಗ ಹಲವು ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳು ಪತ್ತೆಯಾಗಿದೆ. ಇದರಿಂದ ಆತ ಹಲವು ವರ್ಷಗಳಿಂದ ಇದೇ ರೀತಿಯ ವಿಕೃತ ಕೃತ್ಯ ಎಸಗುತ್ತಿದ್ದಾನೆಯೇ ಎನ್ನುವ ಅನುಮಾನ ಮೂಡಿದೆ. ಪೊಲೀಸರು ಈ ದಿಕ್ಕಿನಲ್ಲಿ ಕೂಡಾ ತನಿಖೆ ಮಾಡುತ್ತಿದ್ದಾರೆ.

ಬ್ರಿಮ್ಸ್‌ ಮುಖ್ಯಸ್ಥ ಡಾ.ಮೊಸಿನ್‌ ಉಲ್‌ ಹಕ್‌ ಅವರು ನ್ಯೂಟೌನ್‌ ಪೊಲೀಸ್‌ ಠಾಣೆಗೆ ಅಧಿಕೃತ ದೂರನ್ನು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಮುನೀರ್‌ ಅಹ್ಮದ್‌ನನ್ನು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.