ಭಾನುವಾರ, 25 ಅಕ್ಟೋಬರ್ 2026

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ

ಶ್ರೀನಗರ: ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರ ತಂದೆ, ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲ ಅವರನ್ನು ಹತೆಗೆ ಯತ್ನ ಮಾಡಿರುವ ಘಟನೆ ನಡೆದಿದೆ.

Sponsored

ಮಾರ್ಚ್‌ 11 (ಬುಧವಾರ) ಸಂಜೆ ವಿವಾಹ ಸಮಾರಂಭವೊಂದರಲ್ಲಿ ಫಾರೂಹ್‌ ಅಬ್ದುಲ್ಲಾ ಭಾಗವಹಿಸಿದ್ದು, ಆ ಸಂದರ್ಭದಲ್ಲಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ. ದುಷ್ಕರ್ಮಿಯೋರ್ವ ಗುಂಡು ಹಾರಿಸಿದ್ದಾರೆ.

Marriage AdMarriage AdSponsored

ಅಬ್ದುಲ್ಲಾ ಅವರಿಂದ ಕೆಲವೇ ಕೆಲವು ಹೆಜ್ಜೆಗಳ ಅಂತರದಲ್ಲದಿದ ದುಷ್ಕರ್ಮಿ, ಗುಂಡು ಹಾರಿಸಿದಾಗ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಡಿಜಿ) ಕಮಾಂಡೋಗಳು ತಳ್ಳಿದ್ದಾರೆ. ಗುಂಡಿನ ಗುರಿ ತಪ್ಪಿದೆ. ಅಬ್ದುಲ್ಲಾ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ದಾಳಿಕೋರನನ್ನು ಕಮಲ್‌ಸಿಂಗ್‌ ಜಮ್ವಾಲ್‌ ಎಂದು ಗುರುತಿಸಲಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆಯಲಾಗಿದೆ.