ಖ್ಯಾತ ಜ್ಯೋತಿಷಿ 13 ನೇ ಮಹಡಿಯಿಂದ ಜಿಗಿದು ದುರಂತ ಅಂತ್ಯಕಂಡ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ನ 13ನೇ ಮಹಡಿಯಲ್ಲಿ ವಾಸವಾಗಿದ್ದ ಜ್ಯೋತಿಷಿ ಹಾಗೂ ಆತನ ತಾಯಿ ಇಬ್ಬರು ಸಾವಿಗೀಡಾಗಿದ್ದಾರೆ. ಬೆಡ್ ಮೇಲೆ ಜ್ಯೋತಿಷಿ ತಾಯಿ ಶವ ಪತ್ತೆಯಾಗಿದೆ. ತಾಯಿ ಮೃತಪಟ್ಟ 2 ರಿಂದ 3 ದಿನದ ಬಳಿಕ ಜ್ಯೋತಿಷಿ ದುರಂತ ಅಂತ್ಯ ಕಂಡ ಘಟನೆ ಘಾಜಿಯಾಬಾದ್‌ನಲ್ಲಿ ನಡೆದಿದೆ.
Sponsoredಪೊಲೀಸರು ಘಟನಾ ಸ್ಥಳಕ್ಕೆ ಬಂದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದರು. ನಂತರ ಜ್ಯೋತಿಷಿ ಮನೆಯ ಪರಿಶೋಧನೆಗೆ ತೆರಳಿದ್ದಾರೆ. 13 ನೇ ಮಹಡಿಯಲ್ಲಿನ ಮನೆ ಪರಿಶೀಲನೆ ಮಾಡುತ್ತಿರುವಾಗ ಬೆಡ್ ಮೇಲೆ ಜ್ಯೋತಿಷಿ ತಾಯಿ ಶವ ಪತ್ತೆಯಾಗಿದೆ. ತಾಯಿ ಸತ್ನನಂ ಕೌರ್ ಮೃತಪಟ್ಟು 2 ರಿಂದ 3 ದಿನ ಆಗಿತ್ತು. ನಂತರ ಜ್ಯೋತಿಷಿ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿದ್ದರು. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
Marriage AdSponsoredಜ್ಯೋತಿಷಿ ತಾಯಿ ಮೃತದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಕೋಣೆ ಸೇರಿ ಇಡೀ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ವಶಪಡಿಸಲಾಗಿದೆ. ತಾಯಿಯನ್ನು ಹತ್ಯೆ ಮಾಡಿ ಜ್ಯೋತಿಷಿ ಮಹಡಿಯಿಂದ ಹಾರಿದ್ರಾ? ಅಥವಾ ಸ್ವಯಂ ಬದುಕು ಅಂತ್ಯಗೊಳಿಸಿದ್ದಾರಾ ಅನ್ನೋ ಕುರಿತು ಮರಣೋತ್ತರ ಪರೀಕ್ಷೆ ವರದಿಗೆ ಪೊಲೀಸರು ಕಾಯುತ್ತಿದ್ದಾರೆ.




