ಶನಿವಾರ, 24 ಅಕ್ಟೋಬರ್ 2026

Naga-Shobita Marriage: ನಾಗ-ಶೋಭಿತಾ ಮದುವೆಗೂ ಮುನ್ನ ವಧುವರರ ಮೇಲೆ ಪ್ರೀತಿಯ ಸುರಿಮಳೆಗೈದ ಸಮಂತಾ

Naga-Shobita Marriage: ಶೋಭಿತಾ ಧೂಳಿಪಾಲ ಹಾಗೂ ನಾಗ ಚೈತನ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಾಗಾ ಚೈತನ್ಯಾ ತಂದೆ ನಾಗಾರ್ಜುನ ಅಕ್ಕಿನೇನಿ ಅವರ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿಯ ಅದ್ಧೂರಿ ಆದರೆ ಸಾಂಪ್ರದಾಯಿಕ ವಿವಾಹ ನಡೆಯಲಿದೆ.

Naga-Shobita Marriage: ಶೋಭಿತಾ ಧೂಳಿಪಾಲ ಹಾಗೂ ನಾಗ ಚೈತನ್ಯ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಾಗಾ ಚೈತನ್ಯಾ ತಂದೆ ನಾಗಾರ್ಜುನ ಅಕ್ಕಿನೇನಿ ಅವರ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಜೋಡಿಯ ಅದ್ಧೂರಿ ಆದರೆ ಸಾಂಪ್ರದಾಯಿಕ ವಿವಾಹ ನಡೆಯಲಿದೆ. ನಾಗ ಮತ್ತು ಶೋಭಿತಾ ಮದುವೆಗೂ ಮುನ್ನ ವಧುವಿನ ಸಹೋದರಿ ಸಮಂತಾ ಧೂಳಿಪಾಲ ಇನ್‌ಸ್ಟಾಗ್ರಾಂನಲ್ಲಿ ಜೋಡಿಯ ಮೇಲೆ ಪ್ರೀತಿಯ ಮಳೆಗರೆದಿದ್ದಾರೆ.

ತನ್ನ ಅಕ್ಕ ಶೋಭಿತಾ ಧೂಳಿಪಾಲ ಅವರ ಪೆಲ್ಲಿ ಕುತುರು ಸಮಾರಂಭದ ಚಿತ್ರಗಳನ್ನು ಹಂಚಿಕೊಳ್ಳುವಾಗ, ಸಮಂತಾ ಅವರನ್ನು ‘ಸ್ವೀಟೆಸ್ಟ್ ಪರ್ಸನ್’ ಎಂದು ಕರೆದರು. “ಅತ್ಯಂತ ಸುಂದರ ಪೆಲ್ಲಿ ಕೂತುರು ಮತ್ತು ಸಿಹಿಯಾದ ವ್ಯಕ್ತಿಗೆ ಅಭಿನಂದನೆಗಳು. ಅಕ್ಕ ನಿನಗಾಗಿ ಮಾತ್ರ ಪ್ರೀತಿ” ಎಂದು ಬರೆದಿದ್ದಾರೆ.

 

View this post on Instagram

 

A post shared by Samanta Dhulipala (@dr.samantad)

ನಾಗ ಮತ್ತು ಶೋಭಿತಾ ಮದುವೆಗೆ ಹಲವು ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಅತಿಥಿಗಳ ಪಟ್ಟಿಯಲ್ಲಿ ಪ್ರಮುಖ ಹೆಸರುಗಳಾದ ಚಿರಂಜೀವಿ, ಪಿವಿ ಸಿಂಧು, ನಯನತಾರಾ, ಇಡೀ ಅಕ್ಕಿನೇನಿ ಮತ್ತು ದಗ್ಗುಬಾಟಿ ಕುಟುಂಬಗಳು, NTR, ಜೊತೆಗೆ ಶಕ್ತಿ ದಂಪತಿಗಳಾದ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ, ಮತ್ತು ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಇದ್ದಾರೆ.

ನಾಗ ಚೈತನ್ಯ ಅವರ ಮೊದಲ ಮದುವೆ ಸೌತ್‌ನ ಟಾಪ್ ನಟಿ ಸಮಂತಾ ರುತ್ ಪ್ರಭು ಆಗಿತುತ. ಆದಾಗ್ಯೂ, ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಇವರು ವಿಚ್ಛೇದನ ಪಡೆದರು. ಇದೀಗ ನಾಗ ಶೋಭಿತಾ ಅವರನ್ನು ಎರಡನೇ ಮದುವೆಯಾಗುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ