Priyanka Chopra : ರೋಮ್ ನಲ್ಲಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ರೊಮ್ಯಾಂಟಿಕ್ ಸೀನ್! ವಿಡಿಯೋ ವೈರಲ್
ಇವರು ರೋಮ್ ನಗರದಲ್ಲಿ ಸುತ್ತಾಡುತ್ತಿದ್ದಾರೆ. ರೋಮ್ ನಗರಕ್ಕೆ ತೆರಳಿರುವ ನಿಕ್ ಜೋನಸ್ ಅವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಮೂಡ್ ನಲ್ಲಿ ಇದ್ದಂತೆ ಕಾಣುತ್ತಿದೆ .

Priyanka Chopra : ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಗಾಯಕ ನಿಕ್ ಜೋನಾಸ್ ಸೆಲೆಬ್ರಿಟಿ ದಂಪತಿ ಇತ್ತೀಚಿಗೆ ತಮ್ಮ ಪ್ರೀತಿಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು ಸಖತ್ ಸುದ್ದಿಯಲ್ಲಿದ್ದಾರೆ. ಇದೀಗ ಶುಕ್ರವಾರ ಬೆಳಗ್ಗೆ ಹೊಸ ವಿಡಿಯೋವೊಂದನ್ನು ನಿಕ್ ಜೋನಾಸ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Sponsoredಈ ವಿಡಿಯೋದಲ್ಲಿ ದಂಪತಿಯು ಇಟಲಿಯ ರೋಮ್ನ ಬೀದಿಗಳಲ್ಲಿ ನಡೆದುಕೊಂಡು ಹೋಗುವುದು, ಒಬ್ಬರನ್ನೊಬ್ಬರು ಚುಂಬಿಸುವುದು ಮತ್ತು ಜೊತೆಯಾಗಿ ಐಸ್ಕ್ರೀಮ್ ಸೇವಿಸುವುದನ್ನು ಕಾಣಬಹುದು. ನಿಕ್ ಗುಲಾಬಿ ಬಣ್ಣದ ಶರ್ಟ್ ಧರಿಸಿದ್ದು, ಪ್ರಿಯಾಂಕಾ ಚೋಪ್ರಾ ತಿಳಿ ಹಸಿರು ಬಣ್ಣದ ಉಡುಪಿನ ಮೇಲೆ ಕಪ್ಪು ಜಾಕೆಟ್ ಧರಿಸಿದ್ದರು. ಈ ವಿಡಿಯೋ ಗೆ ‘ರೋಮ್’ ಎಂದು ಶೀರ್ಷಿಕೆ ಸಹ ನಿಕ್ ಅವರು ನೀಡಿದ್ದಾರೆ.
ಒಟ್ಟಿನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ನಿಕ್ ಜೋನಸ್ ಜೊತೆ ಹಾಯಾಗಿ ಸಂಸಾರ ಮಾಡುತ್ತಿದ್ದಾರೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಈ ದಂಪತಿ ಪ್ರವಾಸ ಕೈಗೊಂಡಿದ್ದು, ಪ್ರಸ್ತುತ ಇವರು ರೋಮ್ ನಗರದಲ್ಲಿ ಸುತ್ತಾಡುತ್ತಿದ್ದಾರೆ. ರೋಮ್ ನಗರಕ್ಕೆ ತೆರಳಿರುವ ನಿಕ್ ಜೋನಸ್ ಅವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಮೂಡ್ ನಲ್ಲಿ ಇದ್ದಂತೆ ಕಾಣುತ್ತಿದೆ .
ಸದ್ಯ ಈ ವಿಡಿಯೋ ನೋಡಿದ ಕೆಲವೇ ಗಂಟೆಗಳಲ್ಲಿ (Priyanka Chopra Viral Video) ಲಕ್ಷಾಂತರ ಅಭಿಮಾನಿಗಳು ಲೈಕ್ ಮಾಡಿದ್ದಾರೆ. ಜೊತೆಗೆ ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ.
https://www.instagram.com/reel/CrRX7LhJAaF/?utm_source=ig_web_copy_link
ಇದನ್ನು ಓದಿ: Railway station: ರೈಲ್ವೆ ನಿಲ್ದಾಣದ ಎಲ್ಲಾ ಕರ್ತವ್ಯಗಳನ್ನು ಗ್ರಾಮಸ್ಥರೇ ನೋಡಿಕೊಳ್ತಾರಂತೆ!




