ಸೋಮವಾರ, 26 ಅಕ್ಟೋಬರ್ 2026
Trending

ಹೆಲ್ಮೆಟ್‌ ಧರಿಸದೆ ಬುಲೆಟ್‌ ಬೈಕ್‌ ರೈಡ್‌, ಯುವತಿ ಸಾವು, ಗೆಳತಿ ಗಂಭೀರ

Advertisement

ಭಾನುವಾರ ರಾತ್ರಿ ಬೈಕ್‌ ಅಪಘಾತವೊಂದು ನಡೆದಿದ್ದು ಪ್ರಿಯಾ (23) ಎಂಬ ಯುವತಿ ಮೃತಪಟ್ಟಿರುವ ಘಟನೆ ನಡೆದಿದೆ. ರಸ್ತೆಯಲ್ಲಿದ್ದ ಹಂಪ್‌ ಕಾಣದ ಕಾರಣ ನಿಯಂತ್ರಣ ತಪ್ಪಿ ಬಿದ್ದಿದ್ದು, ಹೆಲ್ಮೆಟ್‌ ಧರಿಸದ ಕಾರಣ ತಲೆಗೆ ತೀವ್ರ ಪೆಟ್ಟಾಗಿ ಸಾವಿಗೀಡಾಗಿದ್ದಾರೆ. ಬೈಕ್‌ನಲ್ಲಿದ್ದ ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Sponsored

ಹಾಸನದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಈ ಅಪಘಾತ ನಡೆದಿದೆ. ಚಲಾಯಿಸುತ್ತಿದ್ದ ಬೈಕ್‌ನಿಂದ ಬಿದ್ದು ಯುವತಿ ಸಾವಿಗೀಡಾಗಿದ್ದಾಳೆ.

Advertisement
Advertisement

ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ. ಗಾಯಾಳು ಸ್ವಾತಿಯನ್ನು (24) ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ರಸ್ತೆಯಲ್ಲಿದ್ದ ಹಂಪ್ ಕಾಣದ ಹಿನ್ನೆಲೆ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಯುವತಿಯರಿಬ್ಬರು ಹೆಲ್ಮೆಟ್ ಧರಿಸದ ಕಾರಣ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಪ್ರಿಯಾ ಮತ್ತು ಸ್ವಾತಿ ಹೆಲ್ಮೆಟ್ ಧರಿಸದೆ ಬುಲೆಟ್ ರೈಡ್ ಮಾಡುತ್ತಿದ್ದರು. ಯುವತಿಯರಿಬ್ಬರು ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು.

Advertisement
div class="ere-sticky">