ಅಲಂಕಾರು; ಥಾರ್ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಅಲಂಕಾರು ಬಳಿ ನಡೆದಿದೆ. ಅಲಂಕಾರು ನಿವಾಸಿ ಲೋಕೇಶ್ ಗೌಡ ಮೃತ ವ್ಯಕ್ತಿ.
ಥಾರ್ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದು, ನಂತರ ಮನೆಯೊಂದರ ಬಳಿ ವಾಹನ ಪತ್ತೆಯಾಗಿದೆ. ಥಾರ್ ಚಾಲಕನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



