ಶನಿವಾರ, 24 ಅಕ್ಟೋಬರ್ 2026

ಪುತ್ತೂರು : ಇನ್ನೋವಾ ಕಾರು – ಬೈಕ್‌ ನಡುವೆ ಅಪಘಾತ..!!

ಪುತ್ತೂರು: ಇನ್ನೋವಾ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಪುತ್ತೂರು ಮುಖ್ಯರಸ್ತೆಯಿಂದ ಕೊಂಬೆಟ್ಟು ಸಂಪರ್ಕಿಸುವ ರಸ್ತೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಅಪಘಾತದ ಪರಿಣಾಮ ಬೈಕ್ ನುಜ್ಜು ಗುಜ್ಜಾಗಿದ್ದು ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ. ಬೈಕ್ ಚಾಲಕನಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.