ಶನಿವಾರ, 24 ಅಕ್ಟೋಬರ್ 2026

Vittla: ವಿಟ್ಲ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿ ಮೃತ್ಯು

 

Vittla: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ವಿಟ್ಲ ಸಮೀಪದ ಅಳಿಕೆಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಅಳಿಕೆ ಗ್ರಾಮದ ಇಬ್ರಾಹಿಂ ಉಸ್ತಾದ್ ಅವರ ಪುತ್ರ ಇಸ್ಮಾಯಿಲ್(37) ಎಂದು ಗುರುತಿಸಲಾಗಿದೆ.

ತೆಂಗಿನ ಮರದಿಂದ ಅಲ್ಯೂಮಿನಿಯಂ ಪೈಪ್ ಬಳಸಿ ಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕರೆಂಟ್ ಶಾಕ್ ಹೊಡೆದ ಪರಿಣಾಮ ಮೃತ ಪಟ್ಟಿದ್ದಾರೆ.