ಭಾನುವಾರ, 8 ನವೆಂಬರ್ 2026

ಕಡಬ: ಹಿಟ್‌ ಆಂಡ್‌ ರನ್‌-ಸವಾರೆಗೆ ಗಾಯ

Advertisement
Advertisement

ಕಡಬ: ಸುಬ್ರಹ್ಮಣ್ಯ-ಉಪ್ಪಿನಂಗಡಿ ರಸ್ತೆಯ ಐತ್ತೂರು ಗ್ರಾಮದ ಬಜಕೆರೆ ಬಳಿ ಸಂಭವಿಸಿದ ಹಿಟ್‌ ಆಂಡ್‌ ರನ್‌ ಪ್ರಕರಣದಲ್ಲಿ ಮಹಿಳೆಗೆ ಗಾಯವಾಗಿದೆ.

Sponsored

ಐತ್ತೂರು ಗ್ರಾಮದ ಕಲ್ಲಾಜೆ ಮನೆ ನಿವಾಸಿ ದರ್ಶಿನಿ (39) ಅವರು ನ.6 ರಂದು ಬೆಳಿಗ್ಗೆ ತಮ್ಮ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಬಜಕೆರೆ ತಲುಪಿದಾಗ ಎದುರಿನಿಂದ ಬಂದ ಕಪ್ಪು ಬಣ್ಣದ ವಾಹನವೊಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ದರ್ಶಿನಿ ಅವರು ರಸ್ತೆ ಬದಿಗೆ ಬಿದ್ದು ಗಾಯವಾಗಿದೆ.

Advertisement
Advertisement

ಸ್ಥಳೀಯ ವ್ಯಕ್ತಿ ತಿರುಪತಿ ಎನ್ನುವವರು ಗಾಯಾಳುವನ್ನು ಉಪಚರಿಸಿ, ರಬ್ಬರ್‌ ಪ್ಲಾಂಟೇಶನ್‌ ಮೇಸ್ತ್ರಿ ಮತ್ತು ಸೂಪರ್‌ವೈಸರ್‌ಗೆ ಮಾಹಿತಿ ನೀಡಿದರು. ಕಡಬ ಆಸ್ಪತ್ರೆಗೆ ಅವರು ದಾಖಲು ಮಾಡಿದ್ದಾರೆ. ಈ ಘಟನೆ ಸಂಬಂಧ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement
Advertisement