ಸೋಮವಾರ, 26 ಅಕ್ಟೋಬರ್ 2026
Trending

Mobile canteen: ಮೊಬೈಲ್‌ ಕ್ಯಾಂಟೀನ್‌ ತೆರೆಯಲು ಸಿಗಲಿದೆ 5 ಲಕ್ಷ ರೂ.ಗಳ ಸಹಾಯಧನ!

Mobile canteen: ಸ್ವಂತ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಬಯಸುವವರಿಗಾಗಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಂಚಾರಿ ಉಪಾಹಾರ ಗೃಹ ಅಥವಾ ಮೊಬೈಲ್‌ ಕ್ಯಾಂಟೀನ್‌ಗಳನ್ನು (Mobile canteen) ಆರಂಭಿಸಲು ಸಹಾಯಧನವನ್ನು ನೀಡುತ್ತಿದೆ.

Mobile canteen: ಸ್ವಂತ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಬಯಸುವವರಿಗಾಗಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಂಚಾರಿ ಉಪಾಹಾರ ಗೃಹ ಅಥವಾ ಮೊಬೈಲ್‌ ಕ್ಯಾಂಟೀನ್‌ಗಳನ್ನು (Mobile canteen) ಆರಂಭಿಸಲು ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 5 ಲಕ್ಷ ರೂ. ವರೆಗಿನ ಸಹಾಯಧನ ಲಭ್ಯವಾಗಲಿದೆ.

Sponsored

ಏನಿದು ಮೊಬೈಲ್‌ ಕ್ಯಾಂಟೀನ್‌ ಸಬ್ಸಿಡಿ ಯೋಜನೆ?

Advertisement
Advertisement

ಕರ್ನಾಟಕ ಸರ್ಕಾರವು ನಿರುದ್ಯೋಗಿ ಯುವಕರಿಗೆ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಲು ಸಹಾಯ ಮಾಡಲು ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು ವ್ಯಕ್ತಿಗಳಿಗೆ ಸಂಚಾರಿ ಕ್ಯಾಂಟೀನ್‌ ವಾಹನಗಳನ್ನು ಖರೀದಿಸಲು ಮತ್ತು ನಿರ್ವಹಿಸಲು ಸಹಾಯಧನವನ್ನು ಒದಗಿಸುತ್ತದೆ. ಅರ್ಹ ಫಲಾನುಭವಿಗಳಿಗೆ 5 ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದಾಗಿದೆ. ಇದು ವಾಹನದ ವೆಚ್ಚದ ಗಮನಾರ್ಹ ಭಾಗವನ್ನು ಒಳಗೊಂಡಿರುತ್ತದೆ ಮತ್ತು ಇದು ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಉಪಕ್ರಮಗಳ ಭಾಗವಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತೆ/ಕೌಶಲ್ಯ ತರಬೇತಿ ಹಾಗೂ ತರಬೇತಿ ಪಡೆದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ಉದ್ದಿಮೆಯನ್ನು ಆರಂಭಿಸಲು ಸಬ್ಸಿಡಿಯನ್ನು ಪಡೆಯಲು ಈ ಯೋಜನೆಯಡಿ ಅವಕಾಶವಿರುತ್ತದೆ. ಅದೇ ರೀತಿ ಅತಿಥ್ಯ ಕ್ಷೇತ್ರದಲ್ಲಿ ಸಣ್ಣ ಉದ್ಯಮಿದಾರರಾಗಲು ಅಭ್ಯರ್ಥಿಗಳಿಗೆ ಊಟ, ವಸತಿ ಹಾಗೂ ಪ್ರೋತ್ಸಾಹಧನ ಜೊತೆಗೆ ಕೆಎಸ್‌ಟಿಡಿಸಿ ಸಂಸ್ಥೆಯ ಮೂಲಕ ಒಂದು ತಿಂಗಳು ತರಬೇತಿ ನೀಡಲಾಗುವುದು.

ಯೋಜನೆಯ ಪ್ರಮುಖ ಅಂಶಗಳು

*ಈ ಯೋಜನೆಯು ಪ್ರಾಥಮಿಕವಾಗಿ ನಿರುದ್ಯೋಗಿ ಯುವಕರನ್ನು ಗುರಿಯಾಗಿಸಿಕೊಂಡಿದ್ದು, ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಯೋಜನೆ ಅನ್ವಯವಾಗಲಿದೆ.

*ವ್ಯಕ್ತಿಗಳು ಮೊಬೈಲ್ ಕ್ಯಾಂಟೀನ್ ಸ್ಥಾಪಿಸಲು 5 ಲಕ್ಷ ರೂ.ವರೆಗೆ ಸಬ್ಸಿಡಿ ಪಡೆಯಬಹುದು.

ಅರ್ಹತಾ ಮಾನದಂಡಗಳೇನು?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ನಿಬಂಧನೆಗಳನ್ನು ಪೂರೈಸಬೇಕು.

*ರಾಜ್ಯದ ಮೂಲ ನಿವಾಸಿ ಆಗಿರಬೇಕು.

*ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕೆ ಸೇರಿದವರಾಗಿರಬೇಕು.

*ಕನಿಷ್ಠ SSLC ಉತ್ತೀರ್ಣ ಆಗಿರಬೇಕು.

*ವಯಸ್ಸು 20ರಿಂದ 45 ವರ್ಷದೊಳಗೆ ಇರಬೇಕು.

*ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

*ನಗರ ನಿವಾಸಿಗಳಿಗೆ ವಾರ್ಷಿಕ ಆದಾಯ 2 ಲಕ್ಷ ರೂ.ಕ್ಕಿಂತ ಕಡಿಮೆ ಇರಬೇಕು.

*ಗ್ರಾಮಾಂತರ ನಿವಾಸಿಗಳಿಗೆ ಆದಾಯ ಮಿತಿ 1.5 ಲಕ್ಷ ರೂ. ನಿಗದಿಪಡಿಸಲಾಗಿದೆ

ಅರ್ಜಿದಾರ ಅಥವಾ ಕುಟುಂಬದ ಸದಸ್ಯರು ಸರ್ಕಾರಿ ನೌಕರರಾಗಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು?

ಅರ್ಜಿ ನಮೂನೆ (ಸ್ಥಳೀಯ ಪ್ರವಾಸೋದ್ಯಮ ಇಲಾಖೆಯಲ್ಲಿ ಲಭ್ಯ)

ಆಧಾರ್ ಕಾರ್ಡ್ ಪ್ರತಿ

ಪಾಸ್‌ಪೋರ್ಟ್ ಗಾತ್ರದ 2 ಭಾವಚಿತ್ರ

ಜಾತಿ ಮತ್ತು ಆದಾಯ ಪ್ರಮಾಣ ಪತ್ರ

SSLC ಅಂಕಪಟ್ಟಿ

ಲಘು ವಾಹನ ಚಾಲನಾ ಪರವಾನಗಿ

ಅಫಿಡೆವಿಟ್ (ರೂ.50 ಛಾಪಾ ಕಾಗದದಲ್ಲಿ, ನೌಕರರಲ್ಲ ಎಂಬ ಪ್ರಮಾಣ ಪತ್ರ)

ಅರ್ಜಿ ಸಲ್ಲಿಕೆಯ ವಿಧಾನ:

ನಿಮ್ಮ ಜಿಲ್ಲೆಯಲ್ಲಿ ಇರುವ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಭೇಟಿ ನೀಡಿ.

ಮೊಬೈಲ್‌ ಕ್ಯಾಂಟೀನ್‌ ಆರಂಭಿಸಲು ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ.

ಅರ್ಜಿ ಪರಿಶೀಲನೆಯ ನಂತರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಉದ್ಯಮಶೀಲತೆ ತರಬೇತಿ ನೀಡಲಾಗುತ್ತದೆ.

ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಸಬ್ಸಿಡಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.

ಸಂಪರ್ಕ ಮಾಹಿತಿ:

ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ, ರಂಗಾಯಣ ಆವರಣ, ಬೆಂಗಳೂರು. ದೂರವಾಣಿ ಸಂಖ್ಯೆ: 0836-2955522

ಇದನ್ನೂ ಓದಿ: Rain Prediction: ಜೂನ್ 26 ರಿಂದ ಹೆಚ್ಚಾಗಲಿದೆ ಮುಂಗಾರು 

Advertisement