ಸೋಮವಾರ, 26 ಅಕ್ಟೋಬರ್ 2026
Trending

Bangalore: ವಿಡಿಯೋ ಕಾಲ್ ನಲ್ಲಿ ಪತಿಯ ಸುಸೈಡ್ ನಾಟಕ! ಜಿಮ್ ಟ್ರೈನ‌ರ್ ಉರುಳು ಬಿಗಿದುಕೊಂಡು ಮೃತ್ಯು!

Bangalore: ಪತ್ನಿಗೆ ಹೆದರಿಸಲು ವಿಡಿಯೋ ಕಾಲ್ ಮಾಡಿ ಉರುಳು ಹಾಕಿಕೊಂಡ ಜಿಮ್ ಟ್ರೈನ‌ರ್, ಆಕಸ್ಮಿಕವಾಗಿ ಉರುಳು ಬಿಗಿದುಕೊಂಡು ಮೃತಪಟ್ಟಿದ್ದಾನೆ.

Bangalore

Bangalore: ವಿಧಿಯಾಟ ದೇವರೇ ಬಲ್ಲ ಅನ್ನೋದಕ್ಕೆ ಸಾಕ್ಷಿಯಾಗಿ ಇಲ್ಲೊಂದು ದುರ್ಘಟನೆ ನಡೆದಿದೆ. ಹೌದು, ಪತ್ನಿಗೆ ಹೆದರಿಸಲು ವಿಡಿಯೋ ಕಾಲ್ ಮಾಡಿ ಉರುಳು ಹಾಕಿಕೊಂಡ ಜಿಮ್ ಟ್ರೈನ‌ರ್, ಆಕಸ್ಮಿಕವಾಗಿ ಉರುಳು ಬಿಗಿದುಕೊಂಡು ಮೃತಪಟ್ಟಿದ್ದಾನೆ.

Sponsored

ಇದನ್ನೂ ಓದಿ: T20 World Cup: ಟೀಂ ಇಂಡಿಯಾ ಮುಖ್ಯ ಕೋಚ್ ರೇಸ್ ನಲ್ಲಿ ವಿದೇಶಿ ಕೋಚ್ಗಳ ಹೆಸರು! : ಯಾರಾಗ್ತಾರೆ ಈ ಬಾರಿಯ ಮುಖ್ಯ ಕೋಚ್? : ಇಲ್ಲಿ ನೋಡಿ

ಬೆಂಗಳೂರಿನ (Bangalore) ಬಾಗಲಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಯಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ 28 ವರ್ಷದ ಅಮಿತ್ ಕುಮಾರ್ ಜಿಮ್ ಟ್ರೈನ‌ರ್ ಆಗಿ ಕೆಲಸ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈತ ಜಿಮ್ ಪಕ್ಕದಲ್ಲೇ ವಾಸವಿದ್ದ ಹಾಸನ ಮೂಲದ ಯುವತಿಯನ್ನು ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ.

ಇದನ್ನೂ ಓದಿ: Astro Tips: ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮನೆಯ ಬಾಗಿಲು, ಕಿಟಕಿ ಮುಚ್ಚಬೇಡಿ! ಬಡವರಾಗ್ತೀರಾ ಪಕ್ಕಾ

ಅಮಿತ್ ಕುಮಾ‌ರ್ ಮದುವೆ ಬಳಿಕ ತನ್ನ ಪತ್ನಿ ಯನ್ನು ನರ್ಸಿಂಗ್ ಕೋರ್ಸ್ ಸೇರಿಸಿದ್ದನು. ಆದರೆ ನರ್ಸಿಂಗ್ ಸೇರಿದ ಬಳಿಕ ಪತ್ನಿಯು ಫ್ರೆಂಡ್ಸ್ ಜೊತೆಗೆ ಪದೇ ಪದೆ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಪತ್ನಿ ಫೋನ್ ಬ್ಯುಸಿ ಬರುವ ವಿಚಾರಕ್ಕೆ ಆಗಾಗ್ಗೆ ಪತಿ- ಪತ್ನಿ ನಡುವೆ ಜಗಳ ಆಗುತ್ತಾ ಇತ್ತು. ಹೀಗಾಗಿ ಗಂಡನಿಂದ ದೂರವಾಗಿ ಪತ್ನಿ ಬೇರೊಂದು ಕಡೆ ವಾಸವಾಗಿದ್ದಳು.

ಆದರೆ ಅಮಿತ್ ನಿನ್ನೆ ಸಂಜೆ ಮರಳಿ ಮನೆಗೆ ಬರುವಂತೆ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಮನೆಗೆ ವಾಪಾಸ್ ಬಾರದೆ ಇದ್ದರೆ ನೇಣು ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಕತ್ತಿಗೆ ಉರುಳು ಹಗ್ಗ ಹಾಕಿಕೊಂಡು ವೀಡಿಯೋ ದಲ್ಲಿ ಹಗ್ಗ ಬಿಗಿದುಕೊಳ್ಳುವುದಾಗಿ ಹೆದರಿಸಲು ಮುಂದಾಗಿದ್ದಾನೆ. ಈ ವೇಳೆ ಮೊಬೈಲ್ ಕೈ ಜಾರಿದ್ದು, ಅದನ್ನು ಹಿಡಿಯಲೆಂದು ಹೋದಾಗ ಉರುಳು ಬಿಗಿದುಕೊಂಡು ಅಮಿತ್ ಅಲ್ಲೇ ಮೃತಪಟ್ಟಿದ್ದಾನೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾಗೆ ರವಾನಿಸಲಾಗಿದ್ದು, ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ವಿಚಾರಣೆ ನಂತರ ಇನ್ನಷ್ಟೇ ತಿಳಿದು ಬರಬೇಕಿದೆ.

Comments are closed.