Gruha Jyothi Scheme: ಗ್ರಾಹಕರು ತಿಳಿದುಕೊಳ್ಳಲೇ ಬೇಕಾದ ಹೊಸ ನಿಯಮ! ಗೃಹಜ್ಯೋತಿ ನಿಯಮದಲ್ಲಿ ಮಹತ್ವದ ಬದಲಾವಣೆ; ಯಾವುದೆಲ್ಲ? ಇಲ್ಲಿದೆ ಸಂಪೂರ್ಣ ವಿವರ!!!

Gruha Jyothi Scheme: ಗೃಹಜ್ಯೋತಿ (Gruha Jyothi) ನಿಯಮದಲ್ಲಿ ಮಹತ್ತರ ಬದಲಾವಣೆ ತರಲಾಗಿದ್ದು, ಈ ಕುರಿತು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಗೃಹಜ್ಯೋತಿ ಸರಾಸರಿ ಪ್ರಮಾಣದಲ್ಲಿ ಶೇ.10 ಹೆಚ್ಚುವರಿ ವಿದ್ಯುತ್‌ ನೀಡುವ ಮಾನದಂಡವನ್ನು 10 ಯೂನಿಟ್‌ (Unit)ಆಗಿ ಬದಲಾಯಿಸಲು ಸಂಪುಟ ಸಮ್ಮತಿ ನೀಡಿದೆ.

ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಕೆ.ಜೆ.ಜಾರ್ಜ್‌ (K.J.George) ಮಾತನಾಡಿದ್ದು, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಲಾಗಿತ್ತು. ಇದರ ಅನುಸಾರ ವಾರ್ಷಿಕ ಸರಾಸರಿ ಮೇಲೆ 10% ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅನುವು ಮಾಡಿಕೊಡಲಾಗಿತ್ತು. ಕೇವಲ 20, 30, 40 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ 10% ಹೆಚ್ಚುವರಿ ಯೂನಿಟ್ ಎಂದರೆ ಕಡಿಮೆ ವಿದ್ಯುತ್ (Electricity Supply)ಸಿಗುತ್ತಿತ್ತು. ಹೀಗಾಗಿ 48 ಯೂನಿಟ್ ನೊಳಗೆ ಉಪಯೋಗಿಸುವ ಗ್ರಾಹಕರಿಗೆ 10% ವಿದ್ಯುತ್ ಬದಲಾಗಿ 10 ಯೂನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಸಮ್ಮತಿ ಸೂಚಿಸಿದೆ ಎಂದು ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: BBK-10: ಬಿಗ್ ಬಾಸ್ ಮನೆಯಿಂದ ಮತ್ತೊಬ್ರು ಕಂಟೆಸ್ಟೆಂಟ್ ಜೌಟ್ !!

ಒಬ್ಬ ಗ್ರಾಹಕ ಸರಾಸರಿಯಾಗಿ 43 ಯೂನಿಟ್‌ ವಿದ್ಯುತ್ ಬಳಸಿದರೆ ಹಳೆ ನಿಯಮದ ಪ್ರಕಾರ, ಅದಕ್ಕೆ 10% ಹೆಚ್ಚುವರಿಯಾಗಿ ರಿಯಾಯಿತಿಯನ್ನು ನೀಡಿ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿತ್ತು.ಆಗ ಆತನು 4.8 ಯೂನಿಟ್ ಗಳನ್ನು ಹೆಚ್ಚುವರಿಯಾಗಿ ಬಳಸಬಹುದಾಗಿತ್ತು . ಆದರೆ ಇದೀಗ ಶೇ. 10ಕ್ಕೆ ಬದಲಾಗಿ 10 ಯೂನಿಟ್‌ ಮಾಡಲಾಗಿದ್ದು, 43 ಯೂನಿಟ್ ಬಳಕೆ ಮಾಡುತ್ತಿದ್ದ ಗ್ರಾಹಕನಿಗೆ ಇನ್ನು ಮುಂದೆ 53 ಯೂನಿಟ್ ಸಿಗಲಿದೆ.ಮುಂದಿ‌ನ ತಿಂಗಳ ಬಿಲ್‌ನಿಂದಲೇ ಹೊಸ ನಿಯಮ ಜಾರಿಗೆ ತರಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಈ ನಡುವೆ, ಹೆಚ್ಚು ಯೂನಿಟ್ ಗಳನ್ನು ಬಳಸುವವರಿಂದ ಕೆಲವು ಯೂನಿಟ್ ಗಳನ್ನು ಕಡಿತ ಮಾಡಿ, ವಿದ್ಯುತ್ ಇಲಾಖೆಗೆ ಆಗುತ್ತಿದ್ದ ಹೆಚ್ಚುವರಿ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ

ಗ್ರಾಹಕರು ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸರ್ಕಾರದ ಈ ನಿರ್ಧಾರದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡುವವರು ಕೊಂಚ ನಷ್ಟ ಎದುರಿಸಬೇಕಾಗುತ್ತದೆ. ಅಂದರೆ, ಗ್ರಾಹಕನೊಬ್ಬ 150 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದರೆ ಗೃಹ ಜ್ಯೋತಿ ಯೋಜನೆ ಅನುಸಾರ, 10% ಸೇರಿಸಿ ಉಚಿತ ನೀಡುವ ಹಿನ್ನೆಲೆ 165 ಯೂನಿಟ್‌ ವಿದ್ಯುತ್ ಬಳಕೆಗೆ ಅವಕಾಶವಿತ್ತು. ಆದರೆ ಇದೀಗ ಶೇ. 10 ಬದಲಾಗಿ 10 ಯೂನಿಟ್‌ ನೀಡುತ್ತಿರುವ ಹಿನ್ನೆಲೆ 160 ಯೂನಿಟ್ ಬಳಕೆ ಮಾಡಬಹುದುದಾಗಿದೆ. ಹೀಗಾಗಿ, 5 ಯೂನಿಟ್‌ ಹೆಚ್ಚುವರಿಯಾಗಿ ಬಳಕೆ ಮಾಡುವ ಅವಕಾಶ ಸಿಗದು.

Leave A Reply

Your email address will not be published.