Gas Cylinder Explosion: ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಬರೋಬ್ಬರಿ ಐದು ಮನೆಗಳು ಕುಸಿತ!!!

Gas Cylinder Explosion in Mumbai: ಮುಂಬಯಿಯಲ್ಲಿ ಬುಧವಾರ ಮುಂಜಾನೆ(ನ.29 ರಂದು) ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ (Gas Cylinder Explosion in Mumbai)ಪರಿಣಾಮ 5 ಮನೆಗಳು ಕುಸಿತ ಕಂಡ ಘಟನೆ ವರದಿಯಾಗಿದೆ.

ಮುಂಬೈ ಚೆಂಬೂರ್ ಪ್ರದೇಶದ ಗಾಲ್ಫ್ ಕ್ಲಬ್ ಬಳಿಯ ಓಲ್ಡ್ ಬ್ಯಾರಕ್ ನಲ್ಲಿ ಬೆಳಗ್ಗೆ 7.50ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ ಕಟ್ಟಡಗಳು ಕುಸಿದುಬಿದ್ದಿವೆ ಎನ್ನಲಾಗಿದೆ. ಈ ಘಟನೆಯಲ್ಲಿ 4 ಮಂದಿಗೆ ಸುಟ್ಟ ಗಾಯಗಳಾಗಿದ್ದರೆ, 11 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಗ್ನಿಶಾಮಕ ದಳ, ಪೊಲೀಸ್, ನಾಗರಿಕ ಸಿಬ್ಬಂದಿ ಆಂಬ್ಯುಲೆನ್ಸ್ ಸೇವೆ ಮತ್ತು ಇತರ ಸಂಸ್ಥೆಗಳನ್ನು ಜೊತೆಗೂಡಿ ರಕ್ಷಣಾ ಕಾರ್ಯಾಚರಣೆಯನ್ನು ಮಾಡಿದೆ ಅಧಿಕಾರಿಗಳು ತಿಳಿಸಿದ್ದಾರೆ.

 

ಇದನ್ನು ಓದಿ: Free Ration Scheme: ಇಷ್ಟು ವರ್ಷ ಇವರಿಗೆಲ್ಲಾ ಉಚಿತವಾಗಿ ಸಿಗಲಿದೆ ರೇಷನ್- ಕೇಂದ್ರದಿಂದ ಭರ್ಜರಿ ಹೊಸ ಘೋಷಣೆ

Leave A Reply

Your email address will not be published.