Harassment: ಪೊಲೀಸ್ ಅಧಿಕಾರಿಯಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಸಾರ್ವಜನಿಕರಿಂದ ಬಿತ್ತು ಹಿಗ್ಗಾ ಮುಗ್ಗ ಗೂಸಾ

Harassment: ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿ ಓರ್ವ, ತನ್ನ ಕೆಲಸಕ್ಕೆ ಅವಮಾನ ಆಗುವಂತ ಕೆಲಸ ಮಾಡಿದ್ದು, ಸಾರ್ವಜನಿಕರಿಂದ ಗೂಸಾ ತಿನ್ನುವ ಪರಿಸ್ಥಿತಿ ಬಂದಿದೆ. ಹೌದು, ಕುಡಿದ ಮತ್ತಿನಲ್ಲಿ ಪೊಲೀಸ್​ ಅಧಿಕಾರಿಯೋರ್ವ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (Harassment) ನೀಡಿದ ಆರೋಪದ ಮೇಲೆ ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಿಹಾರದ ಪಟ್ನಾದಲ್ಲಿ ನಡೆದಿದೆ.

ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಆಕ್ರೋಶಕ್ಕೆ ಗುರಿಯಾಗಿದೆ. ವಿಡಿಯೋದಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್​ ಅಧಿಕಾರಿ ತೂರಾಡುತ್ತ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಕಾಣಬಹುದು. ಈತನ ಬೆನ್ನು ಬಿದ್ದಿರುವ ಸಾರ್ವಜನಿಕರು ಆತನನ್ನು ಥಳಿಸುತ್ತಿದ್ದು, ಬಳಿಕ ಆತ ತಪ್ಪಿಸಿಕೊಂಡು ಪೊಲೀಸ್​ ವಾಹನದಲ್ಲಿ ಕುಳಿತು ರಕ್ಷಣೆ ಪಡೆಯುವುದನ್ನು ನೋಡಬಹುದಾಗಿದೆ.

ಇದನ್ನು ಓದಿ: DL, RC New Rule: DL, RCಗೆ ಬಂತು ಹೊಸ ರೂಲ್ಸ್- ಸಾರಿಗೆ ಇಲಾಖೆಯಿಂದ ಹೊಸ ನಿರ್ಧಾರ!!

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಶೇರ್​ ಸಿಂಗ್​ ಎಎಸ್​ಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈತನ ಬಗ್ಗೆ ಈಗಾಗಲೇ ಹಲವು ಬಾರಿ ದೂರುಗಳು ಕೇಳಿ ಬಂದಿದ್ದು, ಇದೀಗ ಆರೋಪಿ ಅಧಿಕಾರಿ ಶೇರ್​ ಸಿಂಗ್​ನನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಎಂದಿದ್ದಾರೆ.

ಇದನ್ನು ಓದಿ: Belthangady: ಸ್ನೇಹಿತನ ಪತ್ನಿಯ ಮೊಬೈಲ್‌ ಫೋನ್‌ ಕದ್ದು ಹಣ ವರ್ಗಾವಣೆ; ಪೊಲೀಸ್‌ ಮೆಟ್ಟಿಲೇರಿದ ಮಹಿಳೆ!!!

Leave A Reply

Your email address will not be published.