Love Affair: ಪಾಠ ಹೇಳಿಕೊಡೋ ಶಿಕ್ಷಕಿ, ವಿದ್ಯಾರ್ಥಿ ಜೊತೆಗೆ ಲವ್ ಅಫೇರ್ ಸ್ಟೋರಿ ! ಇಲ್ಲಿದೆ ಮತಾಂತರದ ಮಾಸ್ಟರ್ ಟ್ವಿಸ್ಟ್

Love Affair: ಪಾಠ ಹೇಳಿಕೊಡೋ ಶಿಕ್ಷಕಿ, ಪ್ರೀತಿ ಹೆಸರಲ್ಲಿ 10ನೇ ತರಗತಿ ವಿದ್ಯಾರ್ಥಿ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿದ್ದ (Love Affair) ಆರೋಪ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಇದೀಗ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕಿಯ ವಿರುದ್ಧ ಎಫ್‌ಐಆ‌ರ್ ದಾಖಲಿಸಿರೋ ಕಾನ್ಸುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Skin Care: ಕತ್ತಿನ ಭಾಗದಲ್ಲಿ ಕಪ್ಪಾಗಿದ್ದರೆ, ಈ ಮನೆ ಮದ್ದು ಬಳಸಿ, ಮಿರಿ ಮಿರಿ ಮಿಂಚುವ ಕಾಂತಿ ಪಡೆಯಿರಿ!

ಅಪ್ರಾಪ್ತ ಬಾಲಕನ ತಂದೆ ತನ್ನ ಮಗನನ್ನು ಶಾಲೆಯ ಶಿಕ್ಷಕಿ ಪ್ರೀತಿಯ ಬಲೆಗೆ ಬೀಳಿಸಿ ಮತಾಂತರಕ್ಕೆ ಮುಂದಾಗಿದ್ದರು ಎಂದು ದೂರಿದ್ದರು. ಈ ಬಗ್ಗೆ ಗೊತ್ತಿದ್ದ ಶಾಲೆಯ ಮುಖ್ಯ ಶಿಕ್ಷಕರು ಸುಮ್ಮನಿರುವಂತೆ ಹೇಳಿದ್ದರು ಎಂದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇದೀಗ ಕೇಸ್ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ.

ಮಾಹಿತಿ ಪ್ರಕಾರ, 10ನೇ ತರಗತಿ ವಿದ್ಯಾರ್ಥಿಗೆ ಪ್ರೀತಿ, ಪ್ರೇಮದ ಪಾಠ ಮಾಡಿದ್ದ ಶಿಕ್ಷಕಿ ಲೈಂಗಿಕ ಸಂಪರ್ಕ ಹೊಂದಿದ್ದರು. ಇದಾದ ಬಳಿಕ ಮತಾಂತರ ಆಗಲು ಒತ್ತಾಯ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಮುಖವಾಗಿ ವಿದ್ಯಾರ್ಥಿಯನ್ನು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದರು, ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಎಫ್‌ಐಆ‌ರ್ ದಾಖಲಿಸಿರುವ ಪೊಲೀಸರು ಪೋಕೋ ಕಾಯ್ದೆ ಮತ್ತು ಮತಾಂತರ ನಿಷೇಧ ಕಾನೂನಿನ ಅನ್ವಯ ತನಿಖೆ ಕೈಗೊಂಡಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Leave A Reply

Your email address will not be published.