AIUDF: ರೇಪ್, ಕಳ್ಳತನ ಮಾಡೋದ್ರಲ್ಲಿ ಮುಸ್ಲಿಮರೇ ಮೊದಲಿಗರು- ಶಾಕಿಂಗ್ ಹೇಳಿಕೆ ನೀಡಿದ ಮುಸ್ಲಿಂ ನಾಯಕ

National news Assam politician AIUDF chief badruddin Ajmal controversy statement of Muslims no 1 in rape dacoity

Badruddin Ajmal: AIUDF (ಆಲ್‌ ಇಂಡಿಯಾ ಯುನೈಟೆಡ್‌ ಡೆಮ್ರಾಕಟಿಕೆ ಫ್ರಂಟ್‌ ಮುಖ್ಯಸ್ಥ ಬದ್ರುದ್ದೀನ್‌ ಅಜ್ಮಲ್‌ (Badruddin Ajmal) ಅವರು ವಿವಾದದ ಕಿಡಿಯೊಂದನ್ನು ಹೊತ್ತಿಸಿದ್ದಾರೆ. “ದೇಶದಲ್ಲಿ ಅತ್ಯಾಚಾರ, ದರೋಡೆ, ಕಳ್ಳತನ, ಲೂಟಿ ಮಾಡುವಲ್ಲಿ ಮುಸ್ಲಿಮರೇ ನಂಬರ್‌ 1 ಇದ್ದಾರೆ” ಎಂದು ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಎಐಯುಡಿಎಫ್‌ ಪ್ರಬಲ ಪಕ್ಷ ಅಸ್ಸಾಂನಲ್ಲಿ. ಅಸ್ಸಾಂನ ಗೋವಾಲ್‌ಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಬದ್ರುದ್ದೀನ್‌ ಅಜ್ಮಲ್‌ ಅವರು” ಅತ್ಯಾಚಾರ, ಲೂಟಿ, ದರೋಡೆ, ಕಳ್ಳತನದಲ್ಲಿ ನಾವೇ ನಂಬರ್‌ 1 ಇದ್ದೇವೆ. ನಾವು ಜೈಲಿಗೆ ಹೋಗುವುದರಲ್ಲೂ ನಂಬರ್‌ 1 ಇದ್ದೇವೆ. ಶಾಲೆ, ಕಾಲೇಜುಗಳಿಗೆ ಹೋಗದ ನಮ್ಮ ಮಕ್ಕಳು ಬೇರೆಯವರಿಗೆ ಮೋಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಮೋಸ, ವಂಚನೆ ಮಾಡುವವರು ಯಾರು ಎಂದರೆ, ಮುಸ್ಲಿಮರು ಎಂದು ಹೇಳುವ ಪರಿಸ್ಥಿತಿ ಇದೆ” ಎಂದು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದೀಗ ಬದ್ರುದ್ದೀನ್‌ ಅಜ್ಮಲ್‌ ಅವರು ಮುಸ್ಲಿಮರ ಕುರಿತು ಈ ಹೇಳಿಕೆ ನೀಡಿದ್ದು, ಮುಸ್ಲಿಂ ಸಂಘಟನೆ ನಾಯಕರು, ಧಾರ್ಮಿಕ ಗುರುಗಳು ಖಂಡಿಸಿದ್ದಾರೆ. ವಿವಾದ ಉಂಟಾದರೂ ಕ್ಯಾರೇ ಎನ್ನದ ಬದ್ರುದ್ದೀನ್‌ ಅಜ್ಮಲ್‌ ಅವರು ” ನನ್ನ ಹೇಳಿಕೆಗೆ ನಾನು ಬದ್ಧ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Sandalwood Actress Amulya: ಅಮೂಲ್ಯ ಅವರ ಪುಟ್ಟ ಮಕ್ಕಳ ಕೊರಳಲ್ಲೂ ಹುಲಿ ಪೆಂಡೆಂಟ್ ?! ಏನಂದ್ರು ನಟಿ ?!

Leave A Reply

Your email address will not be published.