Blaupunkt 55 TV: ಊಹಿಸದಷ್ಟೂ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ 55 ಇಂಚಿನ ಸ್ಮಾರ್ಟ್ ಟಿವಿ – ಕೊಳ್ಳಲು ಮುಗಿಬಿದ್ದ ಜನ

Latest news Blaupunkt 55 TV 55 inch smart TV available at low price

Blaupunkt 55 TV: ದೊಡ್ಡ ಡಿಸ್ಪ್ಲೇ ಇರುವ ಸ್ಮಾರ್ಟ್ ಟಿವಿ ನಿಮ್ಮ ಮನೆಯಲ್ಲೂ ಇರಬೇಕೆಂಬ ನಿಮ್ಮ ಆಸೆ ಈಡೇರುವ ಸಮಯ ಬಂದಿದೆ. ಹೌದು, ಹಬ್ಬದ ಸೀಸನ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಕೂಡಾ ಶುರುವಾಗಲಿದ್ದು, ಈ ಸಮಯದಲ್ಲಿ Blaupunkt ಟಿವಿಯ ಎರಡು ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. ಗ್ರಾಹಕರಿಗಾಗಿ ಫ್ಲಿಪ್‌ಕಾರ್ಟ್‌ನೊಂದಿಗೆ ವಿಶೇಷ ಪಾಲುದಾರಿಕೆಯ ಮೂಲಕ ಕಂಪನಿಯು ಭಾರತದಲ್ಲಿ ಎರಡು ಹೊಸ ಸ್ಮಾರ್ಟ್ ಟಿವಿ ಆಗಿರುವ, 43-ಇಂಚಿನ QLED ಟಿವಿ ಮತ್ತು 55-ಇಂಚಿನ 4K Google TVಯನ್ನು ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Blaupunkt 43-inch QLED TV :
Blaupunkt 43-ಇಂಚಿನ QLED ಟಿವಿ ಉತ್ತಮ ಡಿಸ್ಪ್ಲೇ ಮತ್ತು ಸೌಂಡ್ ಸಿಸ್ಟಮ್ ಅನ್ನು ಹೊಂದಿದ್ದು, ಇದು 1.1 ಬಿಲಿಯನ್ ಬಣ್ಣಗಳನ್ನು ಪ್ರದರ್ಶಿಸುತ್ತದೆ. HDR10+ ಮತ್ತು ಡಾಲ್ಬಿ ವಿಷನ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ Blaupunkt 43-ಇಂಚಿನ QLED ಟಿವಿಯನ್ನು ವಿವಿಧ ಸಾಧನಗಳಿಗೆ ಸುಲಭವಾಗಿ ಕನೆಕ್ಟ್ ಮಾಡಬಹುದು. ಟಿವಿಯನ್ನು ಬ್ಲೂಟೂತ್ 5.0 ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ ಮೂಲಕ ಸುಲಭವಾಗಿ ಸಂಪರ್ಕಿಸಬಹುದು. ಇದು Google ಅಸಿಸ್ಟೆಂಟ್ ಸಂಚಾಲಿತ ರಿಮೋಟ್‌ನೊಂದಿಗೆ ಬರುತ್ತದೆ. ಇದರಿಂದ ವಾಯ್ಸ್ ಕಮಾಂಡ್ ನೊಂದಿಗೆ ಟಿವಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಈ ಟಿವಿ ಬೆಲೆ 28,999 ರೂ ಆಗಿದೆ.

Blaupunkt 55-inch 4K Google TV :
Blaupunkt 55-ಇಂಚಿನ Google TV Google TV ಯಿಂದ ನಡೆಸಲ್ಪಡುತ್ತದೆ. Play Store ಮೂಲಕ 10,000 ಅಪ್ಲಿಕೇಶನ್‌ಗಳು, ಇನ್ ಬಿಲ್ಟ್ Chromecast ಮತ್ತು AirPlay ಸಪೋರ್ಟ್ ಮತ್ತು 2GB RAM,16GB ROM ಮತ್ತು Mali-G52 GPU ಜೊತೆಗೆ MT9062 ಪ್ರೊಸೆಸರ್‌ನೊಂದಿಗೆ ಬರುತ್ತದೆ.

Blaupunkt 55-ಇಂಚಿನ Google TV 1 ಬಿಲಿಯನ್ ಬಣ್ಣಗಳೊಂದಿಗೆ ಬೆಜೆಲ್-ಲೆಸ್ 4K HDR10+ ಡಿಸ್ಪ್ಲೇ, 60W ಸ್ಟಿರಿಯೊ ಬಾಕ್ಸ್ ಸ್ಪೀಕರ್ ಸಿಸ್ಟಮ್, DTS TruSurround ತಂತ್ರಜ್ಞಾನ, ಬ್ಲೂಟೂತ್ 5.0, ಡ್ಯುಯಲ್-ಬ್ಯಾಂಡ್ Wi-Fi, ಗೂಗಲ್ ಅಸಿಸ್ಟೆಂಟ್-ಚಾಲಿತ ರಿಮೋಟ್, ಮೂರು HDMI ಪೋರ್ಟ್, ಎರಡು USB ಪೋರ್ಟ್‌ಗಳು ಮತ್ತು DVB-C/DVB-T/T2 ನೊಂದಿಗೆ ಬರುತ್ತದೆ. ಭಾರತದಲ್ಲಿ ಇದರ ಬೆಲೆ 34,999 ರೂ. ಆಗಿದೆ

ಸದ್ಯ ಗ್ರಾಹಕರಿಗೆ ಈ ಎರಡೂ ಟಿವಿಗಳು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ICICI, Kotak ಅಥವಾ Axis ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿದರೆ ಖರೀದಿದಾರರು 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

Leave A Reply

Your email address will not be published.