Delhi : ಮೆಟ್ರೋ ರೈಲಿನಲ್ಲಿ ಅಪ್ರಾಪ್ತೆಯ ಮೇಲೆ ಸ್ಖಲನ ಮಾಡಿದ ಭೂಪ! ಮುಂದೇನಾಯ್ತು?

National news a man who ejaculated on a minor girl in a Delhi metro train

Delhi: ದೆಹಲಿ (Delhi)ಮೆಟ್ರೋ ರೈಲಿನಲ್ಲಿ(Metro Train)ಹಸ್ತಮೈಥುನ ಮಾಡಿ ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲನ ಮಾಡಿರುವ ಹೇಯ ಕೃತ್ಯ ವರದಿಯಾಗಿದೆ.

ದೆಹಲಿ ಮೆಟ್ರೋದ ‘ರೆಡ್ ಲೈನ್ನಲ್ಲಿ ಬುಧವಾರ ರಾತ್ರಿ 8:30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವ್ಯಕ್ತಿಯೊಬ್ಬ ಮೆಟ್ರೋ ರೈಲಿನಲ್ಲಿ ಹಸ್ತಮೈಥುನ ಮಾಡಿ ಅಪ್ರಾಪ್ತ(Minor)ಬಾಲಕಿಯ ಮೇಲೆ ಸ್ಖಲನ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ರಕ್ಷಾಬಂಧನ (Raksha Bandhan)ಹಬ್ಬದ ನಿಮಿತ್ತ ಮೆಟ್ರೋ ರೈಲಿನಲ್ಲಿ ಜನರ ಸಂಖ್ಯೆ ಹೆಚ್ಚಿತ್ತು ಎನ್ನಲಾಗಿದೆ. ಇದೇ ಕೋಚ್‌ನಲ್ಲಿ ತಾಯಿ ಮತ್ತು ಮಗಳು ಪ್ರಯಾಣ ಮಾಡುತ್ತಿದ್ದರೆನ್ನಲಾಗಿದೆ. ಈ ವೇಳೆ ವ್ಯಕ್ತಿಯೊಬ್ಬ ಮಗಳ ಮೇಲೆ ಸ್ಖಲನ ಮಾಡಿರುವುದನ್ನು ಗಮನಿಸಿದ ತಾಯಿ(Mother)ಕೂಡಲೇ ಮಗಳನ್ನು ಕರೆದೊಯ್ದು ಸೀಲಂಪುರ ನಿಲ್ದಾಣದಲ್ಲಿ ಇಳಿದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಸ್ಖಲನ ಮಾಡಿರುವ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದೆ.ಈ ಘಟನೆಯನ್ನು ಗಮನಿಸಿದ ಇಬ್ಬರು ಸಹ ಪ್ರಯಾಣಿಕರು ಆ ವ್ಯಕ್ತಿಯನ್ನು ಹಿಡಿದು ಶಾಹದಾರ ನಿಲ್ದಾಣದಲ್ಲಿರುವ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದು, ಆ ಬಳಿಕ ಆರೋಪಿಯನ್ನು ಮೆಟ್ರೋ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Crime News: ಅಕ್ಕನಿಗೆ ಬಿಯರ್ ಕುಡಿಸಿ ತಂಗಿ ಮಾಡಿದ್ಲು ಖತರ್ ನಾಕ್ ಪ್ಲ್ಯಾನ್! ಕೇಳಿದ್ರೆ ಬೆಚ್ಚಿಬೀಳ್ತೀರ!!!

Leave A Reply

Your email address will not be published.