MS Dhoni: ಅರೆ, ಇವರ ಜತೆ ನಟಿಸ್ತಾರಾ ಕ್ಯಾಪ್ಟನ್ ಕೂಲ್ ಧೋನಿ ? ಸುದ್ದಿ ಕೇಳಿ ಅಚ್ಚರಿಪಟ್ಟ ಸಿನಿ ಪ್ರಿಯರು !!

Cricket news MS dhoni set to make movie debut with thalapathy Vijay

MS Dhoni: ಟೀಂ ಇಂಡಿಯಾದ ಯಶಸ್ವಿ ನಾಯಕ ಎಂಎಸ್ ಧೋನಿ ಐಪಿಎಲ್ 2023ರಲ್ಲಿ 5 ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ರಶಸ್ತಿಯನ್ನು ಗೆದ್ದುಕೊಟ್ಟರು. ಕ್ಯಾಪ್ಟನ್ ಕೂಲ್ ಅವರ ಶಾಂತ ಸ್ವಭಾವ ಮತ್ತು ಮೈದಾನದಲ್ಲಿ ಅವರ ಬುದ್ಧಿವಂತ ನಡೆಗಳಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಧೋನಿ ಸಂಪಾಧಿಸಿದ್ದಾರೆ. ಇದೀಗ ಧೋನಿ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ.‌

ಟೀಂ ಇಂಡಿಯಾ ಕ್ರಿಕೆಟ್ ದಂತಕಥೆ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಇಂದಿಗೆ ಮೂರು ವರ್ಷಗಳೇ ಕಳೆದಿವೆ. ಇದೀಗ ಹೊಸ ಬಿಸಿ ಬಿಸಿ ಸುದ್ದಿ ವೈರಲ್ ಆಗಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದೆ. ಹೌದು, ಮಹೇಂದ್ರ ಸಿಂಗ್ ಧೋನಿ (MS Dhoni), ಇದೀಗ ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ತಲಪತಿ ವಿಜಯ್‌ ಜತೆ ಸಿನಿಮಾ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೋನಿ, ತಲಪತಿ ವಿಜಯ್‌ ಅವರ ಬಹುನಿರೀಕ್ಷಿತ ಚಿತ್ರವಾಗಿರುವ ‘ತಲಪತಿ 69’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ತಲಪತಿ 69′(Thalapathy 68) ಸಿನಿಮಾವು ಪ್ರಖ್ಯಾತ ಫಿಲ್ಮ್ ಮೇಕರ್ ವೆಂಕಟ್ ಪ್ರಭು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಎಂ ಎಸ್ ಧೋನಿ ನಟಿಸುತ್ತಿರುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಇನ್ನು ಧೋನಿ ಈ ಸಿನಿಮಾದಲ್ಲಿ ನಟಿಸುತ್ತಾರಾ? ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ: Actor Vinayakan: ಈಗಾಗಲೇ 10 ಹುಡುಗೀರ ಜತೆ ಆಗಿದೆ, ‘ನನ್ನೊಂದಿಗೆ ಮಲಗ್ತೀಯಾ ‘ ಅಂತ ನೇರ ಕೇಳ್ತೀನಿ, ಓಕೆ ಆದ್ರೆ ಓಕೆ… ಒಂದ್ವೇಳೆ ಇಲ್ಲಾ ಅಂದ್ರೆ …!!!

Comments are closed.