Job Alert: ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಬೊಂಬಾಟ್ ನ್ಯೂಸ್ ; 6000 ಕ್ಕೂ ಮಿಕ್ಕಿ ಉದ್ಯೋಗ ಅವಕಾಶ !

Education news teachers recruitment over 6000 posts to be recruited in ekalavya residential School

Teacher recruitment :ಶಿಕ್ಷಕರ ಹುದ್ದೆಯ (Teacher recruitment ) ಕನಸು ಕಾಣುವವರಿಗೆ ಸಿಹಿಸುದ್ದಿ ಇಲ್ಲಿದೆ. ನ್ಯಾಷನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೋಡೆಂಟ್ಸ್ (NEASTS) ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ (EMRS) 6,000 ಕ್ಕೂ ಹೆಚ್ಚು ಉದ್ಯೋಗಾವಕಾಶವಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರ :
ಪದವೀಧರ ಶಿಕ್ಷಕ (TGT): 5660
ಹಾಸ್ಟೆಲ್ ವಾರ್ಡನ್ (ಪುರುಷ) 335
ಹಾಸ್ಟೆಲ್ ವಾರ್ಡನ್ (ಮಹಿಳೆ)-334

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಆಗಸ್ಟ್ 2023

ವಿದ್ಯಾರ್ಹತೆ :

• ಟ್ರೈನ್ ಗ್ರಾಜುಯೇಟ್ ಟೀಚರ್ (ಟಿಟಿಟಿ) – ಎನ್ಸಿಆರ್ಟಿಯ ಪ್ರಾದೇಶಿಕ ಶಿಕ್ಷಣ ಕಾಲೇಜು ಅಥವಾ ಇತರ ಎನ್ಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಡಿಗ್ರಿ ಕೋರ್ಸ್ (ಒಆರ್) ಬ್ಯಾಚುಲರ್ಸ್ ಆನರ್ಸ್ ಪದವಿ,
• ಅಭ್ಯರ್ಥಿಯು 03 ವರ್ಷಗಳ ಪದವಿ ಕೋರ್ಸ್ ನಲ್ಲಿ ಕನಿಷ್ಠ 2 ವರ್ಷಗಳ ಕಾಲ ಅಗತ್ಯ ವಿಷಯಗಳನ್ನು ಅಧ್ಯಯನ ಮಾಡಿರಬೇಕು. (ಅಥವಾ) ಸಂಬಂಧಪಟ್ಟ ವಿಷಯದಲ್ಲಿ ಪದವಿ ಪಡೆದಿರಬೇಕು.
• ಹಾಸ್ಟೆಲ್ ವಾರ್ಡನ್ – ಸಂಬಂಧಪಟ್ಟ ವಿಷಯದಲ್ಲಿ ಎನ್ಸಿಇಆರ್ಟಿಯ ಪ್ರಾದೇಶಿಕ ಶಿಕ್ಷಣ ಕಾಲೇಜು ಅಥವಾ ಇತರ ಎನ್ಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಇಂಟಿಗ್ರೇಟೆಡ್ ಡಿಗ್ರಿ ಕೋರ್ಸ್ (ಅಥವಾ) ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ : 35 ವರ್ಷ
ವಯೋಮಿತಿ ಸಡಿಲಿಕೆ: ಎಸ್ಸಿ / ಎಸ್ಟಿ / ಒಬಿಸಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ, ಇಎಂಆರ್‌ನ್ ಉದ್ಯೋಗಿಗಳಿಗೆ 55 ವರ್ಷಗಳವರೆಗೆ.

ವೇತನ: ತರಬೇತಿ ಪಡೆದ ಪದವೀಧರ ಶಿಕ್ಷಕ (ಟಿಜಿಟಿ): ಹಂತ 7 ₹ 44900 -142400/-
ಹಾಸ್ಟೆಲ್ ವಾರ್ಡನ್ ಲೆವೆಲ್ 5 ₹ 29200 – 92300/ =

ಅರ್ಜಿ ಸಲ್ಲಿಕೆ :

• ಅಭ್ಯರ್ಥಿಗಳು ಇಎಂಆರ್‌ಎಸ್ ಅಧಿಕೃತ ವೆಬ್ಬೆಟ್ emrs.tribal.gov.in ಗೆ ಭೇಟಿ ನೀಡಿ.
• ಅರ್ಜಿ ನಮೂನೆಗಾಗಿ ನೋಂದಣಿ ಮಾಡಿ
• ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ
• ಛಾಯಾಚಿತ್ರ,ಸಹಿ ಇತ್ಯಾದಿಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ,
ನೆಟ್ ಬ್ಯಾಂಕಿಂಗ್ / ಡೆಬಿಟ್ / ಕ್ರೆಡಿಟ್ ಕಾರ್ಡ್ ಬಳಸಿ ಪರೀಕ್ಷಾ ಶುಲ್ಕವನ್ನು ಪಾವತಿಸಿ.

ಇದನ್ನೂ ಓದಿ: Young Man Death : ‘ ಒಟ್ಟಿಗೆ ಬದುಕುವ ಅದೃಷ್ಟವಿಲ್ಲ, ಆದರೆ, ನನ್ನ ಅಂತ್ಯಕ್ರಿಯೆಗೆ ನೀನು ಬರಲೇಬೇಕು’ ; ಸಾಯುವ ಮುನ್ನ ವಿಡಿಯೋ ಕಾಲ್ ಮೂಲಕ ಪ್ರೇಯಸಿಗೆ ಯುವಕ ಹೇಳಿದ್ದೇನು ?

Comments are closed.