ಬುಧವಾರ, 28 ಅಕ್ಟೋಬರ್ 2026
Trending

Unluckiest Man: ಜಗತ್ತಿನ ಅತಿ ಬ್ಯಾಡ್ ಲಕ್’ನ ವ್ಯಕ್ತಿ ಈತ; 2,90,000 ಕೋಟಿ ಡಾಲರ್ ಶೇರನ್ನು ಕೇವಲ 800 ಡಾಲರ್’ಗೆ ಮಾರಾಟ ಮಾಡಿದ್ದ !

290 ಶತಕೋಟಿ ಡೌಲರ್ ಮೌಲ್ಯದ ಷೇರುಗಳನ್ನು (Share) ಕೇವಲ 800 ಡಾಲರ್‌ಗೆ ಮಾರಾಟ ಮಾಡಿ ತನ್ನ ಅದೃಷ್ಟವನ್ನು ತಾನೇ ಹಾರಲು ಬಿಟ್ಟಿದ್ದಾರೆ.

Unluckiest Man
Image source: ಸಾಕ್ಷಿ

Unluckiest Man: ಅದೃಷ್ಟ ಮತ್ತು ದುರಾದೃಷ್ಟ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಹೌದು, ಯಾವುದೇ ವ್ಯಕ್ತಿಗೆ ಅದೃಷ್ಟ ಮತ್ತು ದುರಾದೃಷ್ಟ ಎನ್ನುವುದು ಕೆಲವೊಮ್ಮೆ ಅರಸಿಕೊಂಡು ಬರುತ್ತವೆ, ಇಲ್ಲವಾದರೆ ಹಕ್ಕಿಯಂತೆ ಹಾರಿ ಪುರ್ರನೆ ಹಾರಿ ಹೋಗಲುಬಹುದು. ಅಂತೆಯೇ ಇವರಂಥ ದುರಾದೃಷ್ಟ ವ್ಯಕ್ತಿ (unluckiest man) ಈ ಜಗತ್ತಿನಲ್ಲಿ ಎಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ.

Sponsored

ಹೌದು, ಆ್ಯಪಲ್ ಕಂಪನಿ (Apple Company) ನಮಗೆ ಗೊತ್ತೇ ಇದೆ. ಮಾರುಕಟ್ಟೆಯಲ್ಲಿ ಅದರ ಮೌಲ್ಯ ಸುಮಾರು 2.9 ಲಕ್ಷ ಕೋಟಿ ಡಾಲರ್ ಇದೆ. ಈ ಕಂಪನಿಯನ್ನು ಹುಟ್ಟು ಹಾಕಿದ ಮೂವರ ಪೈಕಿ ಈ ದುರಾದೃಷ್ಟ ವ್ಯಕ್ತಿಯೂ ಒಬ್ಬರು. ರೊನಾಲ್ಡ್ ವೇಯ್ಸ್ (Ronald Wayne). ಇವರು
290 ಶತಕೋಟಿ ಡೌಲರ್ ಮೌಲ್ಯದ ಷೇರುಗಳನ್ನು (Share) ಕೇವಲ 800 ಡಾಲರ್‌ಗೆ ಮಾರಾಟ ಮಾಡಿ ತನ್ನ ಅದೃಷ್ಟವನ್ನು ತಾನೇ ಹಾರಲು ಬಿಟ್ಟಿದ್ದಾರೆ.

Advertisement
Advertisement

 

ಸ್ಟೀವ್ ವೋಜಿಯಾಕ್(Steve Wozniak), ಸ್ಟೀವ್ ಜಾಬ್ (Steve Jobs) ಮತ್ತು ರೊನಾಲ್ಡ್ ವೇಲ್ಸ್ ( Ronald Wayne) ಮೂವರು ಸೇರಿ ಆ್ಯಪಲ್ ಕಂಪನಿಯನ್ನು ಆರಂಭಿಸಿದರು. ಆ ಸಮಯದಲ್ಲಿ ವೇಯ್ ಅವರಿಗೆ 42 ವರ್ಷ ವಯಸ್ಸಾಗಿತ್ತು. ಇನ್ನುಳಿದ ಇಬ್ಬರು 20 ಹರೆಯದವರು. ವೇಮ್ಸ್ ಅವರಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ದಾಖಲಾತಿಯ ಕೆಲಸವನ್ನು ವಹಿಸಲಾಯಿತು. ಹಾಗಾಗಿ, ಅವರಿಗೆ ಶೇ.10 ರಷ್ಟು ಷೇರುಗಳನ್ನು ಪಡೆದುಕೊಂಡರು. ಕಂಪನಿಯ ಮೊದಲ ಒಪ್ಪಂದವನ್ನೂ ಅವರೇ ಮಾಡಿದ್ದರು. ಅಲ್ಲದೇ ಕಂಪನಿಯ ಲೋಗೋವನ್ನು ಸಹ ಮಾಡಿದರು. ಆ್ಯಪಲ್ ಕಂಪನಿಯ ಮೊದಲ ಲೋಗೋ ಈಗಿನಂತಿರಲಿಲ್ಲ. ಐಸಾಕ್ ನ್ಯೂಟನ್ ಅವರ ಫೋಟೋ ಮತ್ತು ಅವರು ಮರದ ಕೆಳಗೆ ಸೇಬನ್ನು ತಿನ್ನುವ ಚಿತ್ರವನ್ನು ಹೊಂದಿತ್ತು.

ಬಿಸಿನೆಸ್‌ನ ಮೊದಲ ಒಪ್ಪಂದವನ್ನು ಪೂರೈಸುವುದಕ್ಕಾಗಿ ಸ್ಟೀವ್ ಜಾಬ್ ಅವರು ಬೈಟ್ ಶಾಪ್‌ನಿಂದ 15,000 ಡಾಲರ್ ಸಾಲ ಪಡೆದಿದ್ದರು. ಈ ಕಂಪನಿಯ ತನ್ನ ವೆಂಡರ್ಸ್‌ಗೆ ಯಾವತ್ತೂ ಹಣ ಪಾವತಿಸುವುದಿಲ್ಲ ಎಂಬ ಕುಖ್ಯಾತಿಯನ್ನು ಹೊಂದಿತ್ತು. ಹಾಗಾಗಿ, ಇನ್ನು ಸ್ಟೀವ್ ಜಾಬ್ ಅವರು ತಮ್ಮ ಹಣವನ್ನು ಎಂದೂ ಮರಳಿ ಪಡೆಯಲಾರರು ಎಂದು ರೋನಾಲ್ಡ್ ವೇಮ್ಸ್ ಅವರೇ ಭಾವಿಸಿದರು.

ಆ ಸಮಯದಲ್ಲಿ ವೇಮ್ಸ್ ಅವರು ಆಸ್ತಿಗಳನ್ನು ಹೊಂದಿದ್ದರು. ಆದರೆ, ಉಳಿದ ಇಬ್ಬರು ಪಾಲುದಾರರು ಯಾವುದೇ ಆಸ್ತಿಯ ಮಾಲೀಕರಾಗಿರಲಿಲ್ಲ. ಹಾಗಾಗಿ, ಕಂಪನಿ ಒಂದೊಮ್ಮೆ ಉತ್ತಮ ಪ್ರದರ್ಶನ ತೋರದಿದ್ದರೆ ತಮಗೆ ಆರ್ಥಿಕವಾಗಿ ತೊಂದರೆಯಾಗಬುಹದು ಎಂದು ವೇಯ್ ಅವರು ಅಂದಾಜಿಸಿದರು.

ಹಾಗಾಗಿ ಅತೀ ಬುದ್ದಿವಂತಿಕೆ ತೋರಿಸಿ ಕಂಪನಿಯ ಒಪ್ಪಂದದಿಂದ ಹಿಂದೆ ಸರಿದ ವೇಮ್ಸ್ ಅವರು, ತಮ್ಮ ಪಾಲಿನ ಶೇ.10 ಷೇರುಗಳನ್ನು ಕೇವಲ 800 ಡಾಲರ್ ಅಂದರೆ, ಈಗಿನ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಕೇವಲ 65600 ರೂ.ಗೆ ಮಾರಾಟ ಮಾಡಿದರು.

ಒಂದೊಮ್ಮೆ ಶೇ.10 ಷೇರುಗಳು ಈಗಲೂ ವೇಯ್ಸ್ ಅವರ ಬಳಿ ಇದ್ದಿದ್ದರೆ, ಅವರು ಜಗತ್ತಿನ ಶ್ರೀಮಂತ ವ್ಯಕ್ತಿಯಲ್ಲಿ ಒಬ್ಬರಾಗಿರುತ್ತಿದ್ದರು. ಯಾಕೆಂದರೆ, ಆ್ಯಪಲ್ ಕಂಪನಿಯ ಆ ಶೇ.10 ಷೇರುಗಳ ಮೌಲ್ಯ ಈಗ 290 ಬಿಲಿಯನ್ ಡಾಲರ್ ಆಗಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸುಮಾರು, 27.80 ಶತಕೋಟಿ ರೂಪಾಯಿ ಆಗಿದೆ.

ಆದರೆ, ಆ್ಯಪಲ್ ನನಗೆ ಸೂಕ್ತವಾದ ಸಂಸ್ಥೆಯಾಗಿರಲಿಲ್ಲ. ನಾನು ಈಗಲೂ ಅಲ್ಲೇ ಇದ್ದಿದ್ದರೆ, 20 ವರ್ಷಗಳಿಂದ ದಾಖಲಾತಿಗಳನ್ನು ಪರಿಶೀಲಿಸುವುದನ್ನಷ್ಟೇ ಮಾಡುತ್ತಿದ್ದೆ, ವೇಮ್ಸ್ ಅವರಿಗೆ ಈ ಕುರಿತು
ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಸಂದರ್ಶನವೊಂದರಲ್ಲಿ ವೇಮ್ಸ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

 

ಇದನ್ನು ಓದಿ: SCS Scheme: ಹಿರಿಯ ನಾಗರೀಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ !! ಅಬ್ಬಬ್ಬಾ.. ಪ್ರತೀ ತಿಂಗಳೂ ಇಷ್ಟೊಂದು ದುಡ್ಡು ಸಿಗುತ್ತಾ? 

Advertisement