ಕುಂಡೆ ತಿರುಗಿಸಿ ಹೂಸು ಬಿಟ್ಟು, ಅದನ್ನು ಮಾರಾಟ ಮಾಡಿ ಲಕ್ಷಾಂತರ ಗಳಿಸುತ್ತಿದ್ದ ಹುಡುಗಿ ಈಗ ಆಸ್ಪತ್ರೆಗೆ !

ಬೆಂಗಳೂರು: ತನ್ನ ಹೂಸನ್ನು ಅಪರಿಚಿತರಿಗೆ ಭಾರೀ ಮೊತ್ತಕ್ಕೆ ಮಾರಾಟ ಮಾಡುವ ಮೂಲಕ ಸುದ್ದಿಯಾಗಿದ್ದ 31 ವರ್ಷದ ಕಿರುತೆರೆ ಸೆಲೆಬ್ರಿಟಿ ಸ್ಟೆಫನಿ ಮ್ಯಾಟಿಯೊ ಅವರು ಈಗ ಆಸ್ಪತ್ರೆಯಲ್ಲಿದ್ದಾರೆ.

Ad Widget

ಆಕೆಯ ಆಕೆಯ ಹೂಸಿಗೆ ಅತಿಯಾದ ಬೇಡಿಕೆ ಕಂಡು ಬಂದ ಹಿನ್ನಲೆಯಲ್ಲಿ ಯಾರ್ರಾಬರ್ರಿಯಾಗಿ ಆಹಾರ ಪೇರಿಸಲು ಆಕೆ ತೊಡಗಿದ್ದಾಳೆ. ಹೆಚ್ಚು ಹೂಸು ಮ್ಯಾನುಫ್ಯಾಕ್ಟರ್ ಮಾಡಲು ಆಕೆ ಒಂದೇ ದಿನದಲ್ಲಿ ಮೂರು ಪ್ರೋಟೀನ್ ಶೇಕ್‌ಗಳು ಮತ್ತು ಕಪ್ಪು ಬೀನ್ ಸೂಪ್‌ನ ಬೃಹತ್ ಬೌಲ್ ಅನ್ನು ತನ್ನ ಹೊಟ್ಟೆಯೊಳಗೆ ಇಳಿಸಿದ್ದಳು. ಇದೀಗ ಆ ಇನ್ಪುಟ್ ಮೆಟೀರಿಯಲ್ ಆಕೆಗೆ ಸಮಸ್ಯೆ ತಂದೊಡ್ಡಿದೆ.

Ad Widget . . Ad Widget . Ad Widget . Ad Widget

Ad Widget

ನನಗೆ ಉಸಿರಾಡಲು ತುಂಬಾ ಕಷ್ಟಕರವಾಗಿತ್ತು ಮತ್ತು ನಾನು ಉಸಿರಾಡಲು ಪ್ರಯತ್ನಿಸಿದಾಗಲೆಲ್ಲಾ ನನ್ನ ಹೃದಯದ ಸುತ್ತ ಒಂದು ಸೆಳೆತದ ಸಂವೇದನೆ ಅನುಭವಿಸುತ್ತಿದ್ದೆ. ಅದು ಸಹಜವಾಗಿ ನನ್ನ ಆತಂಕವನ್ನು ಹೆಚ್ಚಿಸಿತು. ನಾನು ನಿಜವಾಗಿ ನನ್ನ ಸ್ನೇಹಿತರಿಗೆ ಕರೆ ಮಾಡಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿಕೊಂಡೆ. ಏಕೆಂದರೆ ನನಗೆ ಹೃದಯಾಘಾತವಾದ ಅನುಭವಾಯಿತು” ಎಂದು ಸ್ಟೆಫನಿ ವಿವರಿಸಿದ್ದಾಳೆ. ದೇಹದ ಚಯಾಪಚಯ ಕ್ರಿಯೆಯ ನಂತರ ಉತ್ಪತ್ತಿಯಾಗುವ ಅನಗತ್ಯ ಗ್ಯಾಸ್ ಹೊರಕ್ಕೆ ಬಿಡೋದು ಸಾಮಾನ್ಯ. ಅಂತದ್ದರಲ್ಲಿ ಕುಂಡೆಯನ್ನೇ ಗ್ಯಾಸ್ ತಯಾರಿಕಾ ಹಂಡೆ ಮಾಡಿಕೊಂಡರೆ ಇನ್ನೆನಾಗಬೇಡ ?!

Ad Widget
Ad Widget Ad Widget

“ನಾನು ಅನುಭವಿಸುತ್ತಿರುವ ನೋವು ಪಾರ್ಶ್ವವಾಯು ಅಥವಾ ಹೃದಯಾಘಾತದಲ್ಲ. ಆದರೆ ಅದು ತೀವ್ರವಾದ ಗ್ಯಾಸ್ಟ್ರಿಕ್ ಎಂದು ನಂತರ ತಿಳಿದು ಬಂದಿದೆ. ಈಗ ಆಕೆಯು ತನ್ನ ಆಹಾರಕ್ರಮವನ್ನು ಬದಲಾಯಿಸಲು ಮತ್ತು ಗ್ಯಾಸ್ ನಿಗ್ರಹ ಔಷಧಿಯನ್ನು ತೆಗೆದುಕೊಳ್ಳಲು ವೈದ್ಯರು ಆಚೆಗೆ ಸಲಹೆ ನೀಡಿದ್ದಾರೆ. ಇದರಿಂದಾಗಿ ಲಕ್ಷಾಂತರ ದುಡಿಯುತ್ತಿದ್ದ ಆಕೆಯ ಬಿಸಿನೆಸ್ಸಿಗೆ ಪೆಟ್ಟು ಬಿದ್ದಿದ್ದು ಈಗ ‘ ಹೂಸು ತಯಾರಿಕಾ ಘಟಕ’ ಶಟ್ ಡೌನ್ ಆಗಿದೆಯಂತೆ. ಹಾಂಗಂತ ಖುದ್ದು ಎಂದು ಸ್ಟೆಫನಿ ಹೇಳಿ ಕೊಂಡಿದ್ದಾಳೆ.

Leave a Reply

error: Content is protected !!
Scroll to Top
%d bloggers like this: