ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2021

News

ಕರಾವಳಿ ,ಮಲೆನಾಡಿನಲ್ಲಿ ಮತ್ತೆ ಸದ್ದು ಮಾಡಿದೆ ಸ್ಯಾಟ್‌ಲೈಟ್ ಕರೆ | ಗುಪ್ತಚರ ಇಲಾಖೆ ಹೈ ಅಲರ್ಟ್

ಮಂಗಳೂರು: ಕರಾವಳಿ ಸೇರಿದಂತೆ ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಕರೆ ಸದ್ದು ಮಾಡಿದೆ. ಈ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಟ್ಟಾರಣ್ಯದಿಂದ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಕರೆ ಬೆಚ್ಚಿ ಬೀಳಿಸಿತ್ತು. ವಿದೇಶಕ್ಕೆ ಸತತ ಫೋನ್ ಕರೆ…

ಉಡುಪಿ

ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಎಸೈ ಹಲ್ಲೆ ಆರೋಪ | ರಾತ್ರೋರಾತ್ರಿ ಠಾಣೆಗೆ ಮುತ್ತಿಗೆ

ಕುಂದಾಪುರ: ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಕುಂದಾಪುರ ನಗರ ಠಾಣಾಧಿಕಾರಿ ಹೊಡೆದಿದ್ದಾರೆ ಎಂದು ಆರೋಪಿಸಿ ಹಿಂದು ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಕುಂದಾಪುರ ನಗರ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.…

News

ಪಿಯುಸಿ ಅಭ್ಯರ್ಥಿಗಳಿಂದ ಭಾರತೀಯ ಅಂಚೆ ಇಲಾಖೆಯಲ್ಲಿ 221 ಪೋಸ್ಟ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!!
ಆನ್ಲೈನ್ ಅರ್ಜಿ ಸಲ್ಲಿಸಲು ನವೆಂಬರ್ 12 ಕೊನೆಯ ದಿನ

ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲಿಚ್ಛಿಸುವ ಉದ್ಯೋಗಕಾಂಕ್ಷಿಗಳಿಗೆ ಸುವರ್ಣವಾಕಾಶವನ್ನು ಅಂಚೆ ಇಲಾಖೆ ಕಲ್ಪಿಸಿಕೊಟ್ಟಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 221 ಪೋಸ್ಟ್ ಮ್ಯಾನ್,ಸಾರ್ಟಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಇಲಾಖೆ ನಿರ್ಧರಿಸಿದ್ದು, ಕ್ರೀಡಾ ಕೋಟಾದಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ…

News

ಧರ್ಮಸ್ಥಳ | ಕೆಎಸ್ಆರ್ಟಿಸಿ ಡಿಪೋದಲ್ಲಿ ನಿಂತಿದ್ದ ಬಸ್ನಲ್ಲಿ ದಿಢೀರ್ ಬೆಂಕಿ, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ

ಧರ್ಮಸ್ಥಳದ ಕೆಎಸ್ಆರ್ಟಿಸಿ ಡಿಪೋದಲ್ಲಿ ಟ್ರಿಪ್ ಮುಗಿಸಿ ನಿಲ್ಲಿಸಿದ್ದ ಬಸ್ ಒಂದರ ಮುಂಭಾಗದಲ್ಲಿ ಆಕಸ್ಮಿಕವಾಗಿ ಎಲೆಕ್ಟ್ರಿಕಲ್ ವೈರ್ ಶಾರ್ಟ್ ಸರ್ಕ್ಯೂಟ್ ಅಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ನಡೆದಿದೆ. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳ ದೌಡಾಯಿಸಿದ್ದು,ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಸಾಮಾನ್ಯರಲ್ಲಿ ಅಸಾಮಾನ್ಯರು

ಹಾವು ಕಚ್ಚಿದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಸೆಗಣಿ ರಾಶಿಯಲ್ಲಿ ಹೂತಿಟ್ಟ ಪತಿ | ಹಾವಾಡಿಸುವ ವ್ಯಕ್ತಿಯ ಮಂತ್ರದಿಂದ ಬದುಕುಳಿದಳೇ ಆಕೆ ‌?!

ಅದೇನೋ ಗೊತ್ತಿಲ್ಲ ಮೂಢನಂಬಿಕೆ ಎಂಬುದು ಕೆಲವರಿಗೆ ಅಷ್ಟು ನಂಬಿಕೆ. ಎಲ್ಲಾ ವಿಷಯ ಸುಳ್ಳು ಎಂಬುದನ್ನು ಹೇಳಲು ಆಗುವುದಿಲ್ಲ. ಆದ್ರೆ ಪ್ರತಿಯೊಂದು ವಿಷಯವನ್ನು ನಂಬಿ ಕೈ ಚೆಲ್ಲಿ ಕೂರುವುದು ಒಳಿತಲ್ಲ.ಆದರೆ ಅನೇಕ ಬಾರಿ ಈ ಮೂಢನಂಬಿಕೆಗಳು ಜೀವಕ್ಕೆ ಸಂಚಕಾರ ತಂದಿದ್ದೂ…

News

ರೆಸ್ಟೋರೆಂಟ್ ನಲ್ಲಿ ಗುಲಾಬ್ ಜಾಮೂನ್ ನೀಡಿದ ತಟ್ಟೆಯಲ್ಲಿ ತೇಲುತ್ತಿತ್ತು ಜಿರಳೆ !! | ತಪ್ಪೊಪ್ಪಿಕೊಳ್ಳದ ರೆಸ್ಟೋರೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗ್ರಾಹಕ

ಕೆಲವೊಮ್ಮೆ ರೆಸ್ಟೋರೆಂಟ್ಗಳಲ್ಲಿ ಆಹಾರದಲ್ಲಿ ಸೊಳ್ಳೆ ನೊಣ ಬಿದ್ದಿರುವುದು ಮಾಮೂಲು. ಅದನ್ನು ಆಗಲೇ ಮಾಲಕರಿಗೆ ಹೇಳಿ ಬೇರೆ ಆಹಾರ ತರಿಸಿಕೊಂಡು ತಿನ್ನುವವರು ಹಲವರಿದ್ದಾರೆ. ಆದರೆ ಇಲ್ಲೊಂದು ರೆಸ್ಟೋರೆಂಟ್ ನಲ್ಲಿ ನಡೆದಿದ್ದ ಘಟನೆ ಎಲ್ಲರಿಗೂ ಆಶ್ಚರ್ಯ ತರುವಂತಿದೆ. ಬೆಂಗಳೂರಿನ ರೆಸ್ಟೋರೆಂಟ್‌ನಲ್ಲಿ ಗ್ರಾಹಕನೊಬ್ಬನಿಗೆ…

News

ಪುತ್ತೂರು : ತೋಟದ ಕೆಲಸಕ್ಕೆ ಬರುತ್ತಿದ್ದ ಅಪ್ರಾಪ್ತೆಗೆ ಗರ್ಭದಾನ ,ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ | ಎಸ್ಪಿಗೆ ದೂರು

ಪುತ್ತೂರು: ಅಪ್ರಾಪ್ತ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಈ ಬಗ್ಗೆ ಅಪ್ರಾಪ್ತ ಬಾಲಕಿಯು ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ದೂರು ನೀಡಿದ್ದು, ದೂರಿನಲ್ಲಿ “ನಾನು ಕಳೆದ ಒಂದು ವರ್ಷ ಮೂರು ತಿಂಗಳಿನಿಂದ ಸುಳ್ಯ…

News

ಇನ್ನು ಮುಂದೆ ನಿಮ್ಮ ಎಲ್ಐಸಿ ಪಾಲಿಸಿಗೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ | ಲಿಂಕ್ ಮಾಡುವುದು ಹೇಗೆ?? ಇಲ್ಲಿದೆ ವಿವರ

ಇನ್ನು ಮುಂದೆ ನಿಮ್ಮ ಜೀವ ವಿಮಾ ನಿಗಮ (LIC) ಪಾಲಿಸಿಗಳೊಂದಿಗೆ ನೀವು ನಿಮ್ಮ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾಗಿದೆ. ಈ ಮಾಹಿತಿಯನ್ನು ಎಲ್‌ಐಸಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಗ್ರಾಹಕರೊಂದಿಗೆ ಹಂಚಿಕೊಂಡಿದೆ. ಟ್ವಿಟ್ಟರ್ ನಲ್ಲಿ “ನಿಮ್ಮ ಪಾನ್…

News

ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಲಕ್ಷಾಂತರ ವಂಚನೆ | ಪ್ರಮುಖ ಆರೋಪಿ ಕಾಣಿಯೂರಿನ ಯುವಕನ ಬಂಧನ

ಪುತ್ತೂರು: ಉದ್ಯೋಗ ಕೊಡಿಸುವ ನೆಪದಲ್ಲಿ ನಕಲಿ ನೇಮಕಾತಿ ಪತ್ರ ಸೃಷ್ಟಿಸಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ ವಂಚಕರ ಜಾಲವೊಂದನ್ನು ಮಡಿಕೇರಿ ಜಿಲ್ಲಾ ಅಪರಾಧ ಪತ್ತೆ ದಳದವರು ಬಂಧಿಸಿದ್ದು, ಆರೋಪಿಗಳ ಪೈಕಿ ಕಾಣಿಯೂರಿನ ವ್ಯಕ್ತಿಯೊಬ್ಬರು ಪ್ರಮುಖ ಆರೋಪಿಯಾಗಿದ್ದಾರೆ ಎಂದು…

News

ವರದಕ್ಷಿಣೆ ಕಿರುಕುಳ | ನವವಿವಾಹಿತೆ ಆತ್ಮಹತ್ಯೆ

ಗೃಹಿಣಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಅಯಂಗೇರಿ ಎಂಬ ಗ್ರಾಮದಲ್ಲಿ ನಡೆದಿದೆ. ಅಮೀರಾ(20) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಈಕೆಗೆ 11 ತಿಂಗಳ ಹಿಂದೆ ರುವೈಸ್ ಎಂಬಾತನೊಂದಿಗೆ ವಿವಾಹವಾಗಿತ್ತು. ಆ ಬಳಿಕ ಆತ…