Pomegranate crop: ದಾಳಿಂಬೆ(Pomegranate) ರೈತರ(Farmer) ಪ್ರಮುಖವಾದ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿದ್ದು(Commercial crop), ಈ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
Sponsored– ದಾಳಿಂಬೆಯಲ್ಲಿ ಒಂದು ಮುಖ್ಯ ರೆಂಬೆ ಹಾಗೂ ಉಪರೆಂಬೆಗಳು ಎಲ್ಲ ದಿಕ್ಕುಗಳಲ್ಲಿ ಹರಡಿರುವಂತೆ ಆಕಾರ ಕೊಟ್ಟು ಜುಲೈನಲ್ಲಿ ಚಾಟನಿ ಮಾಡಬೇಕು.
– ಪ್ರತಿ ವರ್ಷ 400:200:200 ಗ್ರಾಂ. ಸಾರಜನಕ, ರಂಜಕ, ಪೋಟ್ಯಾಷ್ ಗೊಬ್ಬರವನ್ನು ಕೊಡುವುದರಿಂದ, ಗಿಡಗಳು ಉತ್ತಮ ಇಳುವರಿ ಕೊಡುತ್ತವೆ.
– ಸೆಪ್ಟೆಂಬರ್ ಮೊದಲ ವಾರದಲ್ಲಿ ಮಣ್ಣಿನ ತೇವಾಂಶವು , a 2.5 2 ದ್ರಾವಣವನ್ನು ಗಿಡಗಳಿಗೆ ಸಿಂಪಡಿಸುವುದರಿಂದ ದಾಳಿಂಬೆ ಇಳುವರಿ ಹೆಚ್ಚಾಗುತ್ತದೆ.
– ದಾಳಿಂಬೆ ಗಿಡಗಳ ನಡುವಿನ ಜಾಗದಲ್ಲಿ ಅಂತರ ಬೇಸಾಯ ಮಾಡಬಹುದು.
– ಪಾತಿಯಲ್ಲಿ ಬೆಳೆದ ಕಸವನ್ನು ಕೈಯಿಂದ ತೆಗೆದು, ಪಾತಿಗೆ ತೋಟದ ಸಸ್ಯ ತಾಜ್ಯಗಳನ್ನು ಹೊದಿಕೆಯಾಗಿ ಹಾಕಿ ಕಳೆ ನಿರ್ವಹಣೆ ಮಾಡಬಹುದಾಗಿದೆ.




