Day: June 2, 2021

ಬಂಟ್ವಾಳ | ಸಿಮೆಂಟ್ ಶೀಟ್ ಅಳವಡಿಸುತ್ತಿದ್ದಾಗ ಜಾರಿ ಬಿದ್ದು ಕೆಲಸಗಾರ ಮೃತ್ಯು

ಬಂಟ್ವಾಳ : ಪ್ಲೈ ವುಡ್ ಫ್ಯಾಕ್ಟರಿಗೆ ಸಿಮೆಂಟ್ ಸೀಟು ಹಾಕುವ ವೇಳೆ ಓರ್ವ ಕಾರ್ಮಿಕ ಸೀಟು ತುಂಡಾಗಿ ಕೆಳಕ್ಕೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟು,ಇನ್ನೊಬ್ಬ ಕಾರ್ಮಿಕನ ಕೈಗೆ ಗಾಯಗೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಅಬೂಬಕ್ಕರ್ ಸಿದ್ದಿಕ್‌(68) ಮೃತಪಟ್ಟವರು,ನಂದಾವರ ನಿವಾಸಿ ಇಬ್ರಾಹಿಂ ಖಲೀಲ್ (24) ಗಾಯಗೊಂಡವರು. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫ್ಲೈವುಡ್ ಫ್ಯಾಕ್ಟರಿಯ ಮಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಿ ಮಾಲಕ ಬಿ ಅಬ್ದುಲ್ ಸಲಾಂ ವಿರುದ್ಧ ದೂರು …

ಬಂಟ್ವಾಳ | ಸಿಮೆಂಟ್ ಶೀಟ್ ಅಳವಡಿಸುತ್ತಿದ್ದಾಗ ಜಾರಿ ಬಿದ್ದು ಕೆಲಸಗಾರ ಮೃತ್ಯು Read More »

ಹಿಂದೂ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಅವಹೇಳನಕಾರಿ ಪೋಸ್ಟ್ | ಫಾರ್ವರ್ಡ್ ಮಾಡಿದ್ದ ನಾಲ್ವರ ಬಂಧನ, ಮೂಲ ಪುರುಷನಿಗಾಗಿ ಶೋಧ ಕಾರ್ಯ

ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಮತ್ತು ದುರ್ಗಾವಾಹಿನಿ ಸಂಘಟನೆಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಜಾಲ್ ನ ನೌಶಾದ್ (27),  ಸುಳ್ಯ ಕಸಬಾದ ಭವಾನಿ ಶಂಕರ್ (32), ಕಾವೂರಿನ ರವಿ ಅಲಿಯಾಸ್ ಟಿಕ್ಕಿ ರವಿ (38), ಮೂಡಿಬಿದಿರೆಯ ಧರೆಗುಡ್ಡೆಯ ಜಯ ಕುಮಾರ್ (33) ಎಂದು ಗುರುತಿಸಲಾಗಿದೆ. ಬಂಧಿತರು ಶರಣ್ ಪಂಪ್ ವೆಲ್ ಮತ್ತು ದುರ್ಗಾವಾಹಿನಿಗೆ ಸಂಬಂಧಿಸಿದಂತೆ ಬಂದ ವಾಟ್ಸಾಪ್ ಸಂದೇಶವನ್ನು ಪರಿಶೀಲಿಸದೆ ಇತರ …

ಹಿಂದೂ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಅವಹೇಳನಕಾರಿ ಪೋಸ್ಟ್ | ಫಾರ್ವರ್ಡ್ ಮಾಡಿದ್ದ ನಾಲ್ವರ ಬಂಧನ, ಮೂಲ ಪುರುಷನಿಗಾಗಿ ಶೋಧ ಕಾರ್ಯ Read More »

ಕನ್ನಡದ ಈ ನಾಯಕ ನಟಿಗೆ ಲೈಂಗಿಕ ಕಿರುಕುಳ ಕೊಟ್ಟ ನಾಯಕ ನಟ | ನೋವು ಬಿಚ್ಚಿಟ್ಟ ನಟಿ

ಬೆಂಗಳೂರು: ಕಾಲಿವುಡ್ ನ ನಟ ವಿಶಾಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಕನ್ನಡದ ‘ಮನಸೆಲ್ಲಾ ನೀನೆ’ ಸಿನಿಮಾದಲ್ಲಿ ನಟಿಸಿರುವ ನಟಿ ಗಾಯತ್ರಿ ರಘುರಾಮ್ ಗಂಭೀರ ಆರೋಪ ಮಾಡಿದ್ದಾರೆ. ವಿಶಾಲ್ ಹಾಗೂ ಆತನ ಗೆಳೆಯರು ಸೇರಿಕೊಂಡು ಹಲವಾರು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಸರಣಿ ಟ್ವಿಟ್ ಮಾಡಿರುವ ಅವರು, ‘ವಿಶಾಲ್ ಹಾಗೂ ಗೆಳೆಯರು ಚಿತ್ರೋದ್ಯಮಕ್ಕೆ ಬರುವ ಹೊಸ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಸಿಕೊಂಡು ಬಿಸಾಡುವ ಪ್ರವೃತ್ತಿ ಇವರದ್ದು’ …

ಕನ್ನಡದ ಈ ನಾಯಕ ನಟಿಗೆ ಲೈಂಗಿಕ ಕಿರುಕುಳ ಕೊಟ್ಟ ನಾಯಕ ನಟ | ನೋವು ಬಿಚ್ಚಿಟ್ಟ ನಟಿ Read More »

ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ | ಉಜಿರೆಯಲ್ಲಿ ಅಂಗಡಿಗಳ ವಿರುದ್ಧ ಸಿಡಿದೆದ್ದ ನಾಗರಿಕರು

ಲಾಕ್ ಡೌನ್ ವೇಳೆಯಲ್ಲಿ ಪರಿಸ್ಥಿತಿಯ ಲಾಭ ಪಡೆದು ದುಪ್ಪಟ್ಟು ದರಗಳಲ್ಲಿ ವ್ಯಾಪಾರಿಗಳು ತಮ್ಮ ಸೊತ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಜಿರೆಯ ನಾಗರಿಕರು ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದಾರೆ. ಈಗ ಇಡೀ ದೇಶವೆ ಆರ್ಥಿಕ ದುಸ್ಥಿತಿಗೆ ಬಿದ್ದಿದ್ದು, ಲಾಕೌನ್ ನಂತಹ ಈ ಸಮಯದಲ್ಲಿ ಜನರು ಕೆಲಸ ಕಾರ್ಯವಿಲ್ಲದೇ ದುಡಿಮೆ ಇಲ್ಲದ ಈ ಸಮಯದಲ್ಲಿ ಉಜಿರೆ ಗ್ರಾಮದ ಕೆಲವು ತರಕಾರಿ ವ್ಯಾಪಾರಸ್ಥರು ದುಬಾರಿ ಬೆಲೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ. ಅವರು ಜನಸಾಮಾನ್ಯರನ್ನು ದೋಚುವ ಕೆಲಸ …

ತರಕಾರಿಗಳನ್ನು ದುಬಾರಿ ಬೆಲೆಗೆ ಮಾರಾಟ | ಉಜಿರೆಯಲ್ಲಿ ಅಂಗಡಿಗಳ ವಿರುದ್ಧ ಸಿಡಿದೆದ್ದ ನಾಗರಿಕರು Read More »

ಮಂಗಳೂರು | ಯುವತಿ ಮನೆಗೆ ತೆರಳಿ ದಾಂಧಲೆ ಪ್ರಕರಣ, 7 ಮಂದಿ ಅಂದರ್

ನಗರದ ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದಲ್ಲಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೌರಿಶೀಟರ್ ರಂಜಿತ್, ಅವಿನಾಶ್, ಪ್ರಜ್ವಲ್, ದೀಕ್ಷಿತ್, ಹೇಮಂತ್, ಧನುಶ್, ಯತಿರಾಜ್ ಬಂಧಿತ ಆರೋಪಿಗಳು. ಶಕ್ತಿನಗರದ 20 ವರ್ಷದ ಯುವತಿ ಮನೆಯಲ್ಲಿ ಈ ಗಲಾಟೆ ನಡೆದಿತ್ತು. ಹೇಮಂತ್ ಎಂಬಾತ ಯುವತಿಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಇತ್ತೀಚೆಗೆ ಯುವತಿ ಮನೆಗೆ ರೌಡಿ ಶೀಟರ್ ಗಳ ಜೊತೆ ತೆರಳಿ, ದಾಂಧಲೆ ನಡೆಸಿದ್ದ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ …

ಮಂಗಳೂರು | ಯುವತಿ ಮನೆಗೆ ತೆರಳಿ ದಾಂಧಲೆ ಪ್ರಕರಣ, 7 ಮಂದಿ ಅಂದರ್ Read More »

ನನ್ನ ಬಳಿ ಇರೋದು ಎರಡೇ ಚಡ್ಡಿ. ಈಗ ಅವೂ ಹರಿದಿದೆ. ಯಾರಿಗೆ ಹೇಳ್ಲಿ ನನ್ ಪ್ರಾಬ್ಲಮ್ ?! ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದ ವ್ಯಕ್ತಿ

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಅಗತ್ಯ ವಸ್ತುಗಳ ಬಗ್ಗೆಯೇ ಹೆಚ್ಚು ಒತ್ತು ನೀಡಿತ್ತು. ಆದರೆ, ವ್ಯಕ್ತಿಯೊಬ್ಬರು ಬಟ್ಟೆಯಂಗಡಿ ತೆರೆಸಿ ಎಂದು ಒಳ ಚಡ್ಡಿ ಯ ಸಮಸ್ಯೆ ಹೇಳಿಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮಾಡಿರುವ ಮನವಿ ಇದೀಗ ರಾಜ್ಯದೆಲ್ಲೆಡೆ ಹಾಸ್ಯದ ವಸ್ತುವಾಗಿ ವ್ಯಾಪಕ ಚರ್ಚೆಗೀಡಾಗುತ್ತಿದೆ. ಮೈಸೂರು ಮೂಲದ ನಾಗರಿಕರೊಬ್ಬರು ಸಿಎಂ ಯಡಿಯೂರಪ್ಪ ಅವರಿಗೆ ಒಂದು ವಿಶಿಷ್ಟ ಶೈಲಿಯಲ್ಲಿ ಮನವಿ ಮಾಡಿದ್ದು, ಈ ಪತ್ರ ಈಗ ಭಾರೀ ಚರ್ಚೆಗೆ ಗ್ರಾಸ. ‘ನನ್ನ ಬಳಿ ಇರುವುದು ಎರಡೇ ಎರಡೂ ಚಡ್ಡಿಗಳು. …

ನನ್ನ ಬಳಿ ಇರೋದು ಎರಡೇ ಚಡ್ಡಿ. ಈಗ ಅವೂ ಹರಿದಿದೆ. ಯಾರಿಗೆ ಹೇಳ್ಲಿ ನನ್ ಪ್ರಾಬ್ಲಮ್ ?! ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದ ವ್ಯಕ್ತಿ Read More »

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ | ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಡಾಲರ್ಸ್ ಕಾಲೋನಿಯ ಧವಳಗಿರಿಯ ಮನೆ ನವೀಕರಣ ಹಿನ್ನೆಲೆ ಇಂದು ಮನೆ ನೋಡಲು ಸಿಎಂ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಲಾಕ್‍ಡೌನ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕೊರೊನಾ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ಜೂನ್ 7 ರ ನಂತರವೂ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಉತ್ತರಿಸಿದರು. ಲಾಕ್‍ಡೌನ್ ಎಷ್ಟು ದಿನ ವಿಸ್ತರಣೆಯಾಗಲಿದೆ ಸಂಜೆಯ ಹೊತ್ತಿಗೆ ತಿಳಿದು ಬರಲಿದೆ. ರಫ್ತು ಆಧಾರಿತ ಸೇವೆ ನಾಳೆಯಿಂದ ಆರಂಭವಾಗಲಿದೆ. …

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ | ಸಿಎಂ ಯಡಿಯೂರಪ್ಪ Read More »

ತಂದೆಯ ಅಂತ್ಯಸಂಸ್ಕಾರದ ವೇಳೆ ಕುಸಿದು ಬಿದ್ದು ಮಗ ಸಾವು | ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ

ಬಂಟ್ವಾಳ : ತಂದೆಯ ಅಂತ್ಯ ಸಂಸ್ಕಾರದ ವೇಳೆ ಮಗನೂ ಹೃದಯಾಘಾತದಿಂದ ಕುಸಿದು ಬಿದ್ದು ಪುತ್ರನೂ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಿಂದ ವರದಿಯಾಗಿದೆ. ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ಕೆ.ಪಿ.ಟಿ.ಯ ನಿವೃತ ಪ್ರೊಫೆಸರ್ ಭುಜಂಗ ಶೆಟ್ಟಿ ಅವರು ಕೋವಿಡ್ ನಿಂದ ನಿಧನರಾಗಿದ್ದು,ಅವರ ಅಂತ್ಯಕ್ರಿಯೆಯನ್ನು ಸೇವಾ ಭಾರತಿ ಕಾರ್ಯಕರ್ತರು ಕೋವಿಡ್ ನಿಯಾಮವಳಿಯಂತೆ ನೆರವೇರಿಸುತ್ತಿದ್ದ ವೇಳೆ ಅವರ ಮಗ ಶೈಲೇಶ್ ಶೆಟ್ಟಿ ಅವರು ಕುಸಿದು ಬಿದ್ದು ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ …

ತಂದೆಯ ಅಂತ್ಯಸಂಸ್ಕಾರದ ವೇಳೆ ಕುಸಿದು ಬಿದ್ದು ಮಗ ಸಾವು | ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ Read More »

ಪುತ್ತೂರು: ಮೃತದೇಹ ತರಲು ಹೋಗುತ್ತಿದ್ದ ಸುಳ್ಯದಿಂದ ಮಂಗಳೂರಿಗೆ ಹೋಗುತ್ತಿದ್ದ ಆ್ಯಂಬುಲೆನ್ಸ್ ಗೆ ಇಕೋ ಢಿಕ್ಕಿ

ಪುತ್ತೂರು: ಸುಳ್ಯದ ವ್ಯಕ್ತಿಯೊಬ್ಬರು ಕೋವಿಡ್ ನಿಂದ‌ ಮಂಗಳೂರಿನಲ್ಲಿ ಮೃತ ಪಟ್ಟಿದ್ದು,ಅವರ ಮೃತ ದೇಹವನ್ನು ತರಲೆಂದು ಮಂಗಳೂರಿಗೆ ಹೋಗುತ್ತಿದ್ದ ಸುಳ್ಯದ ಆಸ್ಪತ್ರೆಯ ಆ್ಯಂಬುಲೆನ್ಸ್ ಮತ್ತು ವಿಟ್ಲದಿಂದ ಬರುತ್ತಿದ್ದ ಇಕೋ ನಡುವೆ ಪುತ್ತೂರು ಕಬಕದಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಕ್ಕೆ ಹಾನಿಯಾಗಿದ್ದು, ಇಕೋದಲ್ಲಿದ್ದ ಮಹಿಳೆ ಮತ್ತು ಆ್ಯಂಬುಲೆನ್ಸ್ ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಗರ್ಡಾಡಿ | ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯ ವಶ

ಗರ್ಡಾಡಿ : ಇಲ್ಲಿಯ ಕಾಣೇಲು ಎಂಬಲ್ಲಿ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯವನ್ನು ಪೊಲೀಸರು ದಾಳಿ ಮಾಡಿ  ವಶಪಡಿಸಿಕೊಂಡ ಘಟನೆ ಜೂ.1ರಂದು ವರದಿಯಾಗಿದೆ. ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ಸೌಮ್ಯರವರು ಕಾಣೇಲು ಎಂಬಲ್ಲಿಯ ಬೋಜ ಪೂಜಾರಿ ಎಂಬವರ ಮನೆಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ವಿವಿಧ ನಮೂನೆಯ ರೂ.42,356 ಮೌಲ್ಯದ 58.68 ಲೀಟರ್ ಮದ್ಯ ಹಾಗೂ 82.53 ಲೀಟರ್ ಬಿಯರ್ ಮತ್ತು ನಗದು ರೂ14,125 ನ್ನು, …

ಗರ್ಡಾಡಿ | ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯ ವಶ Read More »

error: Content is protected !!
Scroll to Top