ಪುತ್ತೂರು: ಸುಳ್ಯದ ವ್ಯಕ್ತಿಯೊಬ್ಬರು ಕೋವಿಡ್ ನಿಂದ ಮಂಗಳೂರಿನಲ್ಲಿ ಮೃತ ಪಟ್ಟಿದ್ದು,ಅವರ ಮೃತ ದೇಹವನ್ನು ತರಲೆಂದು ಮಂಗಳೂರಿಗೆ ಹೋಗುತ್ತಿದ್ದ ಸುಳ್ಯದ ಆಸ್ಪತ್ರೆಯ ಆ್ಯಂಬುಲೆನ್ಸ್ ಮತ್ತು ವಿಟ್ಲದಿಂದ ಬರುತ್ತಿದ್ದ ಇಕೋ ನಡುವೆ ಪುತ್ತೂರು ಕಬಕದಲ್ಲಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಎರಡೂ ವಾಹನಕ್ಕೆ ಹಾನಿಯಾಗಿದ್ದು, ಇಕೋದಲ್ಲಿದ್ದ ಮಹಿಳೆ ಮತ್ತು ಆ್ಯಂಬುಲೆನ್ಸ್ ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.