ಗರ್ಡಾಡಿ : ಇಲ್ಲಿಯ ಕಾಣೇಲು ಎಂಬಲ್ಲಿ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯವನ್ನು ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡ ಘಟನೆ ಜೂ.1ರಂದು ವರದಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ಸೌಮ್ಯರವರು ಕಾಣೇಲು ಎಂಬಲ್ಲಿಯ ಬೋಜ ಪೂಜಾರಿ ಎಂಬವರ ಮನೆಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ವಿವಿಧ ನಮೂನೆಯ ರೂ.42,356 ಮೌಲ್ಯದ 58.68 ಲೀಟರ್ ಮದ್ಯ ಹಾಗೂ 82.53 ಲೀಟರ್ ಬಿಯರ್ ಮತ್ತು ನಗದು ರೂ14,125 ನ್ನು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.