ಉಪ್ಪಿನಂಗಡಿ | ಮಹಿಳೆಯರು ಸ್ನಾನ ಮಾಡುವಾಗ ಇಣುಕಿ ನೋಡುವಾತ ಪೊಲೀಸ್ ವಶಕ್ಕೆ

Share the Article

ಪುತ್ತೂರು: ಏನೆಲ್ಲಾ ಚಟಗಳನ್ನು ಬೆಳೆಸಿಕೊಂಡಿರುತ್ತಾರೆ ಎಂಬುದು ಊಹಿಸಲಸಾಧ್ಯದ ಮಾತು.ಇಲ್ಲೊಬ್ಬ ಆಸಾಮಿ ಮಹಿಳೆಯರು ಸ್ನಾನ ಮಾಡುವಾಗ ಇಣುಕಿ ನೋಡುವ ಚಟವನ್ನು ಬೆಳೆಸಿಕೊಂಡು ಸಿಕ್ಕಿ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಇದು ನಡೆದದ್ದು ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಪುಳಿತ್ತಡಿ ಎಂಬಲ್ಲಿ.

ಕಳೆದ ಕೆಲದಿನಗಳಿಂದ ಪುಳಿತ್ತಡಿ ಭಾಗದಲ್ಲಿ ಯುವಕನೋರ್ವ ಮಹಿಳೆಯರು ಸ್ನಾನ ಮಾಡುತ್ತಿದ್ದ ವೇಳೆ ಕಳ್ಳನಂತೆ ಮೆಲ್ಲಗೆ ಬಂದು ಬಾತ್ ರೂಂ ಗೆ ಇಣುಕಿ ವಿಕೃತ ಆನಂದ ಪಡೆಯುತ್ತಿದ್ದ ಎನ್ನಲಾಗಿದೆ.

ಈ ವಿಷಯ ಊರೆಲ್ಲ ಹರಡಿ ಈತನ ಪತ್ತೆಗೆ ಸಾರ್ವಜನಿಕರು ಹೊಂಚು ಹಾಕಿ ಕಾಯುತ್ತಿದ್ದರು.ಆದರೆ ಆತನ ಸುಳಿವೇ ಇರಲಿಲ್ಲ.

ಇದ್ದಕ್ಕಿದ್ದಂತೆ‌ ಮೊನ್ನೆ ರಾತ್ರಿ ಪುಳಿತ್ತಡಿಯ ಮನೆಯೊಂದರ ಬಳಿ ಮಹಿಳೆ ಸ್ನಾನ ಮಾಡುವಾಗ ಇಣುಕಿ ನೋಡುತ್ತಿರುವ ವಿಚಾರ ತಿಳಿದು ಸ್ಥಳೀಯರು ಬಂದು ಈತನನ್ನು ಲಾಕ್ ಮಾಡಿದ್ದಾರೆ.

ಬಳಿಕ ಯುವಕನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ ಎನ್ನಲಾಗಿದೆ.

Leave A Reply